ಹಾಕಿ: ಆರ್‌ಡಬ್ಲ್ಯುಎಫ್‌ ತಂಡಕ್ಕೆ ಗೆಲುವು

7

ಹಾಕಿ: ಆರ್‌ಡಬ್ಲ್ಯುಎಫ್‌ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಆರ್‌ಡಬ್ಲ್ಯುಎಫ್‌ ತಂಡವು ನಾಲ್ಕನೆ ಆವೃತ್ತಿಯ ಕರ್ನಾಟಕ ಹಾಕಿ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಜಯಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ತಂಡವು 4–3 ಗೋಲುಗಳ ಅಂತರದಿಂದ ಪೋಸ್ಟಲ್‌ ತಂಡವನ್ನು ಮಣಿಸಿತು. ವಿಜಯೀ ತಂಡದ ಪರವಾಗಿ ಉಮೇಶ್‌ ಎರಡು ಹಾಗೂ ಕುಶಾ ಅವರು ಒಂದು ಗೋಲು ದಾಖಲಿಸಿದರು. 34ನೇ ನಿಮಿಷದಲ್ಲೂ ಗೋಲು ಗಳಿಸಿದ ಉಮೇಶ್‌, ತಂಡವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ನೆರವಾದರು. ಪೋಸ್ಟಲ್‌ ತಂಡವು ದ್ವಿತಿಯಾರ್ಧದಲ್ಲಿ ಆಟದ ವೇಗ ಹೆಚ್ಚಿಸಿಕೊಂಡಿತು. ಈ ವೇಳೆ ತಂಡದ ಪರವಾಗಿ ವಿನಾಯಕ ಬಿಜವಾಡ ಅವರು 3 ಗೋಲುಗಳನ್ನು ಗಳಿಸಿ

ಎದುರಾಳಿ ತಂಡಕ್ಕೆ ಸವಾಲೆಸೆಯಲು ಪ್ರಯತ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry