ಭಾನುವಾರ, ಡಿಸೆಂಬರ್ 15, 2019
17 °C

ಮುಂಬೈ–ಸನ್‌ರೈಸರ್ಸ್‌ ಹಣಾಹಣಿ ಇಂದು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ–ಸನ್‌ರೈಸರ್ಸ್‌ ಹಣಾಹಣಿ ಇಂದು

ಹೈದರಾಬಾದ್‌: ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್‌) ತಂಡದವರು ಐಪಿಎಲ್‌ನ ಗುರುವಾರದ ಪಂದ್ಯದಲ್ಲಿ ಸೆಣಲಿದ್ದಾರೆ.

ಉತ್ತಮ ಬೌಲಿಂಗ್ ಬಳಗವನ್ನು ಹೊಂದಿರುವ ಎಸ್‌ಆರ್‌ಎಚ್‌ಗೆ ಮುಂಬೈನ ಬಲಿಷ್ಠ ಬ್ಯಾಟಿಂಗ್ ಪಡೆ ಯಾವ ರೀತಿಯ ಉತ್ತರ ನೀಡಲಿದೆ ಎಂಬ ಕುತೂಹಲಕ್ಕೆ ಈ ಪಂದ್ಯ ಕಾರಣವಾಗಲಿದೆ.

ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋತಿದ್ದ ಮುಂಬೈ ಇಂಡಿಯನ್ಸ್ ತಂಡ ಲಯಕ್ಕೆ ಮರಳುವ ಛಲದಲ್ಲಿದೆ. ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿರುವ ಎಸ್‌ಆರ್‌ಎಚ್‌ ಗೆಲ್ಲುವ ಭರವಸೆಯಲ್ಲಿದೆ.

ಭುವನೇಶ್ವರ್ ಕುಮಾರ್‌, ಬಿಲಿ ಸ್ಟಾನ್‌ಲೇಕ್‌ ಮತ್ತು ಸಿದ್ಧಾರ್ಥ್‌ ಕೌಲ್‌, ರಶೀದ್ ಖಾನ್‌ ಮತ್ತು ಶಕೀಬ್ ಅಲ್‌ ಹಸನ್‌ ಅವರನ್ನು ಒಳಗೊಂಡ ಬೌಲಿಂಗ್ ಬಳಗ ಹೈದರಾಬಾದ್ ತಂಡದ ಬಲ. ನಾಯಕ ರೋಹಿತ್ ಶರ್ಮಾ, ಎವಿನ್ ಲೂಯಿಸ್, ಕೀರನ್‌ ಪೊಲಾರ್ಡ್‌ ಮುಂತಾದವರು ಮುಂಬೈ ತಂಡದ ಬ್ಯಾಟಿಂಗ್‌ಗೆ ಶಕ್ತಿ ತುಂಬಿದ್ದಾರೆ. ಮೊದಲ ಪಂದ್ಯದಲ್ಲಿ ಅಚ್ಚರಿ ಮೂಡಿಸಿದ್ದ ಯುವ ಲೆಗ್ ಸ್ಪಿನ್ನರ್ ಮಯಂಕ್ ಮಾರ್ಕಂಡೆ ಈ ಪಂದ್ಯದಲ್ಲೂ ಮಿಂಚುವ ಭರವಸೆಯಲ್ಲಿದ್ದಾರೆ.

‘ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವಲ್ಲಿ ಮಯಂಕ್ ಸಮರ್ಥರಾಗಿದ್ದಾರೆ.

ಅವರು ತಂಡದ ದೊಡ್ಡ ಆಸ್ತಿಯಾಗಿದ್ದಾರೆ’ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.

ಜಸ್‌ಪ್ರೀತ್ ಬೂಮ್ರಾ, ಮುಸ್ತಫಿಜರ್ ರೆಹಮಾನ್‌ ಮತ್ತು ಮಿಷೆಲ್ ಮೆಕ್‌ಲೆನಾಗನ್‌ ಅವರಿಗೆ ನಿರೀಕ್ಷೆಗೆ ತಕ್ಕಂತೆ ಸಾಮರ್ಥ್ಯ ತೋರಲು ಆಗದೇ ಇರುವುದು ಮುಂಬೈ ತಂಡದ ಆತಂಕಕ್ಕೆ ಕಾರಣವಾಗಿದೆ.

ಸಮಯ: ರಾತ್ರಿ 8.00

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌

ಪ್ರತಿಕ್ರಿಯಿಸಿ (+)