ಭಾನುವಾರ, ಡಿಸೆಂಬರ್ 15, 2019
25 °C

ರಾಜಸ್ಥಾನ ರಾಯಲ್ಸ್‌ಗೆ ಒಲಿದ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ರಾಜಸ್ಥಾನ ರಾಯಲ್ಸ್‌ಗೆ ಒಲಿದ ಜಯ

ಜೈಪುರ: ಮಳೆ ಕಾಡಿದ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಬುಧವಾರ ಡೆಲ್ಲಿ ಡೇರ್ ಡೆವಿಲ್ಸ್‌ ತಂಡದ ಎದುರು 10 ರನ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ರಾಯಲ್ಸ್‌ ತಂಡ 17.5 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 153 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಮಳೆ ನಿಂತ ನಂತರ ಡೇರ್‌ ಡೆವಿಲ್ಸ್‌ಗೆ ಆರು ಓವರ್‌ಗಳಲ್ಲಿ 71 ರನ್‌ ಗುರಿ ನೀಡಲಾಯಿತು.

ಗ್ಲೆನ್‌ ಮ್ಯಾಕ್ಸ್‌ವೆಲ್‌, ರಿಷಭ್ ಪಂತ್ ಮತ್ತು ಕ್ರಿಸ್ ಮಾರಿಸ್ ತಂಡಕ್ಕೆ ಜಯ ಗಳಿಸಿಕೊಡಲು ಪ್ರಯತ್ನಿಸಿದರು. ಆದರೆ ಜಯದೇವ ಉನದ್ಕತ್ ಮತ್ತು ಲುಂಗ್ಲಿನ್ ಅವರ ದಾಳಿಗೆ ನಲುಗಿದ ತಂಡಕ್ಕೆ 4 ವಿಕೆಟ್ ಕಳೆದುಕೊಂಡು 60 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ 40 ಎಸೆತಗಳಲ್ಲಿ 45 ರನ್‌ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಐದು ಬೌಂಡರಿಗಳಿದ್ದವು. ಮಧ್ಯಮ ಕ್ರಮಾಂಕದ ಸಂಜು ಸ್ಯಾಮ್ಸನ್ 22 ಎಸೆತಗಳಲ್ಲಿ 37 ರನ್‌ ಗಳನ್ನು ಹೊಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ರಾಯಲ್ಸ್: 17.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 153 ( ಅಜಿಂಕ್ಯ ರಹಾನೆ 45, ಬೆನ್ ಸ್ಟೋಕ್ಸ್‌ 16, ಸಂಜು ಸ್ಯಾಮ್ಸನ್ 37, ಜಾಸ್ ಬಟ್ಲರ್ 29, ರಾಹುಲ್ ತ್ರಿಪಾಠಿ 15; ಎಸ್‌.ನದೀಮ್‌ 34ಕ್ಕೆ2); ಡೆಲ್ಲಿ ಡೇರ್‌ ಡೆವಿಲ್ಸ್‌: 6 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 60 (ಮ್ಯಾಕ್ಸ್‌ವೆಲ್‌ 17, ಪಂತ್‌ 20, ಮಾರಿಸ್‌ 17; ಉನದ್ಕತ್‌ 24ಕ್ಕೆ1, ಲುಂಗ್ಲಿನ್‌ 20ಕ್ಕೆ2). ಫಲಿತಾಂಶ: ರಾಜಸ್ಥಾನ್ ರಾಯಲ್ಸ್‌ಗೆ 10 ರನ್‌ಗಳ ಜಯ (ಡಕ್ವರ್ಥ್ ಲೂಯಿಸ್ ನಿಯಮದಡಿ). ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌.

ಪ್ರತಿಕ್ರಿಯಿಸಿ (+)