ಶುಕ್ರವಾರ, ಡಿಸೆಂಬರ್ 6, 2019
25 °C

ಶೂಟಿಂಗ್: ತೇಜಸ್ವಿನಿ ಸಾವಂತ್‌ಗೆ ಬೆಳ್ಳಿ

Published:
Updated:
ಶೂಟಿಂಗ್: ತೇಜಸ್ವಿನಿ ಸಾವಂತ್‌ಗೆ ಬೆಳ್ಳಿ

ಗೋಲ್ಡ್‌ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದಿನದಿಂದ ದಿನಕ್ಕೆ ಮಿಂಚುತ್ತಿರುವ ಭಾರತೀಯ ಆಟಗಾರರು ಈ ದಿನ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.

ಭಾರತದ ತೇಜಸ್ವಿನಿ ಸಾವಂತ್ (37) ಅವರು ಮಹಿಳೆಯರ 50 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಅನುಭವಿ ತೇಜಸ್ವಿನಿ ಅವರು ಇದುವರೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಆರು ಪದಕ ಗಳಿಸಿದ್ದಾರೆ. 2006ರಲ್ಲಿ ಎರಡು ಚಿನ್ನ, 2010ರಲ್ಲಿ ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕಕ್ಕೆ ಭಾಜನರಾಗಿದ್ದರು.

ಫೈನಲ್‌ನಲ್ಲಿ 20 ಮಂದಿ ಆಟಗಾರರೊಂದಿಗೆ ಕಾದಾಟಕ್ಕೆ ನಿಂತ ತೇಜಸ್ವಿ ಅವರು, 102.1, 102.4, 103.3, 102.8, 103.7 and 104.7 ಅಂಕಗಳನ್ನು ಪಡೆಯುವುದರ ಮೂಲಕ ಒಟ್ಟು 618.9 ಅಂಕ ಗಳಿಸಿದರು.

ಸಿಂಗಪೂರಿನ ಮಾರ್ಟಿನಾ ಲಿಂಡ್ಸೆ ವೆಲೋಸೋ ಅವರು 621 ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.  618.1 ಅಂಕದ ಮೂಲಕ ಕಂಚಿನ ಪದಕ ಸ್ಕಾಟ್ಲೆಂಡಿನ ಸಿಯೋನೋಯ್ಡ್ ಅವರ ಪಾಲಾಗಿದೆ.

ಪುರುಷರ 25ಮೀಟರ್ಸ್ ಶೂಟಿಂಗ್‌ನಲ್ಲಿ ನೀರಜ್ ಕುಮಾರ್ ಹಾಗೂ ಅನೀಶ್ ಬನ್ವಾಲಾ ಅವರು ಮೊದಲ ಹಂತವನ್ನು ಯಶಸ್ವಿಯಾಗಿ ಮುಗಿಸುವುದರ ಮೂಲಕ ಒಂದು ಮತ್ತು ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ.

NEW DELHI: Tejaswini Sawant has won silver in the finals of the women’s 50m rifle prone, finishing behind Singapore’s Martina Lindsay Veloso. Her medal on Thursday at the Belmont Shooting Centre is India’s 25th, and with Neeraj Kumar and teenage pistol sensation Anish Bhanwala placed first and third respectively after Stage 1 of qualifying in the men’s 25pm rapid fire pistol event, India looks in line for more shooting medals.

This is the sixth CWG medal for 37-year-old Sawant, following two golds in 2006 and a pair of silvers and a bronze in 2010.

In the 20-member finals, Sawant shot series of 102.1, 102.4, 103.3, 102.8, 103.7 and 104.7 for a total of 618.9. Winning gold was Veloso with a Games record total of 621, and bronze was claimed by Scotland’s Seonaid McIntosh who tallied 618.1

ಪ್ರತಿಕ್ರಿಯಿಸಿ (+)