ಸೋಮವಾರ, ಆಗಸ್ಟ್ 10, 2020
26 °C

ಕಾಂಗ್ರೆಸ್‌ ಜಾತಿಗಳ ನಡುವೆ ಕಲಹ ಹುಟ್ಟುಹಾಕುತ್ತಿದೆ: ಅಮಿತ್‌ ಶಾ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಜಾತಿಗಳ ನಡುವೆ ಕಲಹ ಹುಟ್ಟುಹಾಕುತ್ತಿದೆ: ಅಮಿತ್‌ ಶಾ ಆರೋಪ

ಧಾರವಾಡ: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಕಷ್ಟು ಇದೆ. ಪ್ರಧಾನಿ ನರೇಂದ್ರ ಮೊದಿ ಅವರ ಮೇಲೆ ದೇಶದ ಜನರು ವಿಶ್ವಾಸ ಇಟ್ಟಿದ್ದಾರೆ. ದೇಶದಲ್ಲಿ ಜಾತಿ ಜಾತಿಗಳ ನಡುವೆ ಕಲಹ ಹುಟ್ಟಿಸಿ ಅಧಿಕಾರ ನಡೆಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

2014ರಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಬಹುಮತ ಸಿಕ್ಕು ದೇಶದಲ್ಲಿ ಬಿಜೆಪಿ ಬಂತು. ದೇಶದ ಎಲ್ಲ ರಾಜ್ಯಗಳ ನಡುವೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ಚುನಾವಣೆ ಈಗ ಇದೆ. ಯಾರೂ ಬೇಕಾದ್ರು ಕೆಳಿಸಿಕೊಳಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದರು.

ನಾವು ಜನತಾ ನ್ಯಾಯಾಲಯಕ್ಕೆ ಬಂದಿದ್ದೇವೆ. ಕರ್ನಾಟಕ ರಾಜ್ಯ ಭ್ರಷ್ಟಾಚಾರ ಮಾಡಲು ಎಟಿಎಂ ಇದ್ದಂಗೆ ಇದೆ. ಹೀಗಾಗಿ ಈ ಎಟಿಎಂ ಉಳಿಸಿಕೊಳ್ಳಲು ರಾಹುಲ್ ಗಾಂಧಿ ರಾಜ್ಯದಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಎಂ 40 ಲಕ್ಷದ ವಾಚ್‌ ಕಟ್ಟಿಕೊಂಡು ತಿರುಗುತ್ತಾರೆ. ಕೈ ಮುಗಿದು ಕೆಳುತ್ತೆನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ ಎಂದು ಶಾ ಮನವಿ ಮಾಡಿದರು.

ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ: ಬಂಧನ

ಅಮಿತ್ ಶಾಗೆ ಕಪ್ಪು ಬಾವುಟ ಪ್ರದರ್ಶಿಸಲು ಬಂದಿದ್ದ ಸಮತಾ ಸೇನೆಯ ಆರು ಮಂದಿ ಕಾರ್ಯಕರ್ತರನ್ನು ಧಾರವಾಡದದ ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸರು ಬಂಧಿಸಿದ್ದಾರೆ.

ಅಮಿತ್ ಶಾ ವಿರುದ್ಧ ಘೋಷಣೆ ಹಾಕಿದ ಕಾರ್ಯಕರ್ತರು, ಕೋಮುವಾದಿ ಅಮಿತ್ ಶಾಗೆ ಧಿಕ್ಕಾರ ಎಂದು ಕೂಗಿದರು. ಕಾರ್ಯಕರ್ತರನ್ನು ಕರೆದೊಯ್ದ ಪೊಲೀಸರು, ಹಲವು ಕಪ್ಪು ಬಾವುಟ ವಶಕ್ಕೆ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.