ಶುಕ್ರವಾರ, ಡಿಸೆಂಬರ್ 13, 2019
19 °C

ಕಾನ್‌ಸ್ಟೆಬಲ್‌ ಈರಣ್ಣಗೆ ₹ 1 ಸಾವಿರ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನ್‌ಸ್ಟೆಬಲ್‌ ಈರಣ್ಣಗೆ ₹ 1 ಸಾವಿರ ಬಹುಮಾನ

ಸಿಂದಗಿ: ನಗರ ಠಾಣೆಯ ಪೇದೆ ಈರಣ್ಣ ದಳವಾಯಿ ಅವರ ಕರ್ತವ್ಯ ದಕ್ಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉತ್ತರ ವಲಯ ಐಜಿಪಿ ಅಲೋಕ ಕುಮಾರ್ ಅವರು ಸ್ವಂತ ಹಣದಿಂದ ₹ 1000 ಬಹುಮಾನ ನೀಡಿದರು.

ಠಾಣೆಯ ಅಧಿಕಾರಿ ರೌಡಿಗಳ ಬಗ್ಗೆ ಮಾಹಿತಿ ನೀಡಲು ತಡವರಿಸುತ್ತಿದ್ದಂತೆ, ಯಾರಾದರೂ ಒಬ್ಬ ಪೇದೆಯನ್ನು ಕರೆಯುವಂತೆ ಐಜಿಪಿ ತಿಳಿಸಿದರು. ಆಗ ಪೇದೆ ದಳವಾಯಿ ಎಲ್ಲ ರೌಡಿಗಳ ವಿವರವನ್ನು ಪಟಾಪಟ್ ತಿಳಿಸಿದ್ದು ಅವರ ಮೆಚ್ಚುಗೆಗೆ ಕಾರಣವಾಯಿತು. ರೌಡಿಗಳ ವಿಚಾರಣೆ ಮುಗಿದ ನಂತರ ಎಲ್ಲ ಪೋಲಿಸ್ ಅಧಿಕಾರಿಗಳ ಎದುರೇ ಅಲೋಕ್ ಕುಮಾರ ಜೇಬಿನಲ್ಲಿದ್ದ ಹಣ ತೆಗೆದು ಪೇದೆಗೆ ನೀಡಿ ಠಾಣೆಯ ಬಗ್ಗೆ ನಿನ್ನಲ್ಲಿ ವಿಷಯ ಜ್ಞಾನವಿದೆ ಎಂದು ಕೈ ಕುಲಕಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)