ಕರ್ನಾಟಕ–ತಮಿಳುನಾಡು ಗಡಿಭಾಗದಲ್ಲಿ ಪ್ರತಿಭಟನೆ

ಭಾನುವಾರ, ಮಾರ್ಚ್ 24, 2019
32 °C

ಕರ್ನಾಟಕ–ತಮಿಳುನಾಡು ಗಡಿಭಾಗದಲ್ಲಿ ಪ್ರತಿಭಟನೆ

Published:
Updated:
ಕರ್ನಾಟಕ–ತಮಿಳುನಾಡು ಗಡಿಭಾಗದಲ್ಲಿ ಪ್ರತಿಭಟನೆ

ಚಾಮರಾಜನಗರ: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿನ ಗಡಿಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಪುಣುಜನೂರು ಚೆಕ್‌ಪೋಸ್ಟ್‌ ಬಳಿ ಸೇರಿದ ಪ್ರತಿಭಟನಾಕಾರರು ತಮಿಳುನಾಡಿನಲ್ಲಿ ಕರ್ನಾಟಕಕ್ಕೆ ಸೇರಿದ ಬಸ್‌ಗಳ ಮೇಲೆ ನಡೆಯುತ್ತಿರುವ ಕಲ್ಲತೂರಾಟ ಖಂಡಿಸಿ ಘೋಷಣೆಗಳನ್ನು ಕೂಗಿದರು. ಈ ವೇಳೆ, 20ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಡಿಫೆನ್ಸ್‌ ಎಕ್ಸ್‌ಪೋ 2018ಕ್ಕೆ ಚಾಲನೆ ನೀಡಲು ಗುರುವಾರ ಚೆನ್ನೈಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಪು ಬಾವುಟ, ಕಪ್ಪು ಬಲೂನ್ ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ‍ಪಡಿಸಿದ್ದಾರೆ. ಈ ಮಧ್ಯೆ, ಚೆನ್ನೈನಲ್ಲಿ ಆಡಬೇಕಿದ್ದ ಐಪಿಎಲ್‌ ಪಂದ್ಯಗಳನ್ನು ಪುಣೆಗೆ ಸ್ಥಳಾಂತರ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಇನ್ನಷ್ಟು...

ಡಿಫೆನ್ಸ್‌ ಎಕ್ಸ್‌ಪೋ 2018: ಪ್ರಧಾನಿ ಮೋದಿಗೆ ಕಪ್ಪು ಬಾವುಟ, ಕಪ್ಪು ಬಲೂನ್‌ಗಳ ಸ್ವಾಗತ

‘ಕಾವೇರಿ’ದ ಹೋರಾಟ: ಚೆನ್ನೈನಿಂದ ಪುಣೆಗೆ ಐಪಿಎಲ್‌ ಪಂದ್ಯಗಳ ಸ್ಥಳಾಂತರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry