ಭಾನುವಾರ, ಡಿಸೆಂಬರ್ 15, 2019
19 °C

ಪ್ರಿಯದರ್ಶನ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯದರ್ಶನ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್

ಬಾಲಿವುಡ್‌ನಲ್ಲಿ ಇನ್ನೇನು ಅಭಿಷೇಕ್ ಬಚ್ಚನ್ ಅವರ ಕಾಲ ಮುಗಿಯಿತು ಅನ್ನುವಷ್ಟರಲ್ಲಿ, ಅಭಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವ ಸುದ್ದಿಯೊಂದು ಹೊರಬಿದ್ದಿದೆ. ಅನುರಾಗ್ ಕಶ್ಯಪ್ ಅವರ ‘ಮನ್‌ ಮರ್ಜೀಯಾ’ ಸಿನಿಮಾದ ಮೂಲಕ ಮತ್ತೆ ಬಾಲಿವುಡ್‌ ಪ್ರವೇಶಿಸಲಿರುವ ಅಭಿ, ನಿರ್ದೇಶಕ ಪ್ರಿಯದರ್ಶನ್ ಅವರ ‘ರಂಗ್‌ಬಿ ರಂಗಿ’ ಚಿತ್ರದಲ್ಲೂ ಅಭಿನಯಿಸಲಿದ್ದಾರಂತೆ.

‘ರಂಗ್‌ಬಿ ರಂಗಿ’ ಮೂಲಕ ಪ್ರಿಯದರ್ಶನ್ ಕೂಡಾ ಬಾಲಿವುಡ್‌ನಲ್ಲಿ ಸೆಕೆಂಡ್‌ ಇನ್ನಿಂಗ್ಸ್ ಆರಂಭಿಸುವ ಉತ್ಸುಕತೆಯಲ್ಲಿದ್ದಾರೆ. ಇದಾದ ನಂತರ ‘ಬಚ್ಚನ್ ಸಿಂಗ್’ ಅನ್ನುವ ಸಿನಿಮಾವನ್ನೂ ಪ್ರಿಯದರ್ಶನ್ ನಿರ್ದೇಶಿಸಲಿದ್ದು, ಇದರಲ್ಲಿ ಅಭಿಷೇಕ್ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ‍ಶುದ್ಧ ಹಾಸ್ಯ ಚಿತ್ರದಲ್ಲಿ ಮತ್ತೆ ನಟಿಸುತ್ತಿರುವುದು ಅಭಿಷೇಕ್‌ಗೆ ಸಂತಸ ತಂದಿದೆಯಂತೆ. ಒಟ್ಟಿನಲ್ಲಿ ಜ್ಯೂನಿಯರ್ ಬಚ್ಚನ್ ಮತ್ತೆ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಪ್ರತಿಕ್ರಿಯಿಸಿ (+)