ಶುಕ್ರವಾರ, ಡಿಸೆಂಬರ್ 6, 2019
26 °C

ಅಂಬೇಡ್ಕರ್ ಜಯಂತಿ: ಭದ್ರತೆ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರದ ನಿರ್ದೇಶನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್ ಜಯಂತಿ: ಭದ್ರತೆ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರದ ನಿರ್ದೇಶನ

ನವದೆಹಲಿ: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ (ಏಪ್ರಿಲ್ 14) ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಬಗ್ಗೆ ಪರಿಶೀಲಿಸಿ ಭದ್ರತೆ ಬಿಗಿಗೊಳಿಸಿ ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶಿಸಿದೆ.

‘ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್‌ಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪರಿಸ್ಥಿತಿ ವೀಕ್ಷಿಸಿ, ಭದ್ರತೆಯನ್ನು ಖಾತ್ರಿಪಡಿಸಬೇಕು’ ಎಂದು ಸಚಿವಾಲಯ ಹೇಳಿದೆ.

‘ಪ್ರಾಣ ಹಾನಿ ಮತ್ತು ಆಸ್ತಿ ನಷ್ಟದ ಯಾವುದೇ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ’ ಎಂದು ಸಚಿವಾಲಯ ತಿಳಿಸಿದೆ. ಕಳೆದ ಹದಿನೈದು ದಿನಗಳಲ್ಲಿ ಗೃಹ ಇಲಾಖೆ ನೀಡಿದ ಮೂರನೇ ನಿರ್ದೇಶನ ಇದಾಗಿದೆ.

ಅಂಬೇಡ್ಕರ್‌ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಮತ್ತು ದಲಿತರ ಮೇಲೆ ಹಲ್ಲೆ ನಡೆಸಿದ ಹಲವು ಪ್ರಕರಣಗಳು ದೇಶದ ವಿವಿಧೆಡೆ ಇತ್ತೀಚೆಗೆ ನಡೆದಿವೆ.

ಇನ್ನಷ್ಟು...

ಉತ್ತರ ಪ್ರದೇಶ: ಕೇಸರಿ ಬಣ್ಣದ ಅಂಬೇಡ್ಕರ್ ಪ್ರತಿಮೆಗೆ ಮತ್ತೆ ನೀಲಿ ಬಣ್ಣ

ಭೋಪಾಲ್‌: ಅಂಬೇಡ್ಕರ್‌ ಮೂರ್ತಿ ಭಗ್ನ

ತಮಿಳುನಾಡಿನಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪ

ಪ್ರತಿಮೆ ಧ್ವಂಸ: ನಾಚಿಕೆಗೇಡಿನ ಸಂಗತಿ

ಪ್ರತಿಕ್ರಿಯಿಸಿ (+)