ಭಾನುವಾರ, ಡಿಸೆಂಬರ್ 15, 2019
23 °C

ಅಂಬೇಡ್ಕರ್ ಜಯಂತಿಗೆ ‘ಭದ್ರತೆ ಹೆಚ್ಚಿಸಿ’

ಪಿಟಿಐ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್ ಜಯಂತಿಗೆ ‘ಭದ್ರತೆ ಹೆಚ್ಚಿಸಿ’

ನವದೆಹಲಿ: ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಬಗ್ಗೆ ಪರಿಶೀಲಿಸಿ ಮತ್ತು ಭದ್ರತೆಯನ್ನು ಬಿಗಿಗೊಳಿಸಿ ಎಂದು ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

‘ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್‌ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪರಿಸ್ಥಿತಿ ವೀಕ್ಷಿಸಿ, ಭದ್ರತೆಯನ್ನು ಖಾತ್ರಿಪಡಿಸಬೇಕು’ ಎಂದು ಸಚಿವಾಲಯ ಹೇಳಿದೆ.

‘ಪ್ರಾಣ ಹಾನಿ ಮತ್ತು ಆಸ್ತಿ ನಷ್ಟದ ಯಾವುದೇ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಿ’ ಎಂದು ತಿಳಿಸಿದೆ. ಹದಿನೈದು ದಿನಗಳಲ್ಲಿ ಗೃಹ ಇಲಾಖೆ ಮೂರನೇ ಬಾರಿ ಸಲಹೆ ನೀಡಿದೆ.

ಪ್ರತಿಮೆಗೆ ಜಾಲರಿ ಭದ್ರತೆ (ಬದೌನ್) (ಪಿಟಿಐ): ಇಲ್ಲಿನ ಗದ್ದಿ ಚೌಕದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಸುತ್ತ ಜಾಲರಿ ನಿರ್ಮಿಸಿ ಬೀಗ ಹಾಕಿರುವುದು ಗುರುವಾರ ಕಂಡುಬಂತು.

‘ಪ್ರತಿಮೆಗೆ ರಕ್ಷಣೆ ನೀಡುವ ಉದ್ದೇಶಕ್ಕೆ ಈ ರೀತಿ ಜಾಲರಿ ನಿರ್ಮಿಸಿರಬಹುದು. ಆದರೆ ಯಾರು ಈ ಕೆಲಸ ಮಾಡಿರುವುದು ಎಂಬ ಮಾಹಿತಿ ಇಲ್ಲ’ ಎಂದು ಸದರ್ ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದ್ದಾರೆ.

ಭದ್ರತೆಗಾಗಿ ಪ್ರತಿಮೆಯ ಬಳಿ ಗೃಹ ರಕ್ಷಕ ದಳದ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಪ್ರತಿಮೆಗೆ ಭದ್ರತೆ

ಬದೌನ್ (ಪಿಟಿಐ): ಇಲ್ಲಿನ ಗದ್ದಿ ಚೌಕದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಸುತ್ತ ಜಾಲರಿ ನಿರ್ಮಿಸಿ ಬೀಗ ಹಾಕಿರುವುದು ಗುರುವಾರ ಕಂಡುಬಂತು.

‘ಪ್ರತಿಮೆಗೆ ರಕ್ಷಣೆ ನೀಡುವ ಉದ್ದೇಶಕ್ಕೆ ಈ ರೀತಿ ಜಾಲರಿ ನಿರ್ಮಿಸಿರಬಹುದು. ಆದರೆ ಯಾರು ಈ ಕೆಲಸ ಮಾಡಿರುವುದು ಎಂಬ ಮಾಹಿತಿ ಇಲ್ಲ’ ಎಂದು ಸದರ್ ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದ್ದಾರೆ.

ಭದ್ರತೆಗಾಗಿ ಪ್ರತಿಮೆಯ ಬಳಿ ಗೃಹ ರಕ್ಷಕ ದಳದ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರತಿಕ್ರಿಯಿಸಿ (+)