ನವದೆಹಲಿ: ಮಾರ್ಚ್ ಅಂತ್ಯದೊಳಗೆ ರೈಲುಗಳಲ್ಲಿ 1.25 ಲಕ್ಷ ಜೈವಿಕ ಶೌಚಾಲಯಗಳನ್ನು ರೈಲ್ವೆ ಇಲಾಖೆ ಅಳವಡಿಸಿದೆ.
ಕಳೆದ ವರ್ಷ 34,134 ಜೈವಿಕ ಶೌಚಾಲಯಗಳನ್ನು ಅಳವಡಿಸಿದ್ದು, 2017–18ನೇ ಸಾಲಿನಲ್ಲಿ 56,087 ಹೆಚ್ಚುವರಿ ಶೌಚಾಲಯಗಳನ್ನು ಅಳವಡಿಸಿದೆ. 2011ರಲ್ಲಿ ಮೊದಲ ಬಾರಿಗೆ ಗ್ವಾಲಿಯರ್-ವಾರಾಣಸಿ ಬುಂದೇಲ್ಖಂಡ್ ಎಕ್ಸ್ಪ್ರೆಸ್ ರೈಲಿನಲ್ಲಿ ಜೈವಿಕ ಶೌಚಾಲಯ ಅಳವಡಿಸಲಾಗಿತ್ತು.
‘ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ 27 ಹಸಿರು ಕಾರಿಡಾರ್ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ವಿಭಾಗದ ಎಲ್ಲಾ ರೈಲುಗಳಿಗೂ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ’ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.