ಸಾಯಿ ಗೋಲ್ಡ್‌ ಕ್ರಿಕೆಟ್‌ ಕೊಡುಗೆ

7

ಸಾಯಿ ಗೋಲ್ಡ್‌ ಕ್ರಿಕೆಟ್‌ ಕೊಡುಗೆ

Published:
Updated:

ಬೆಂಗಳೂರು: ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಬೆಂಬಲ ಸೂಚಿಸಲು, ಚಿನ್ನಾಭರಣ ಖರೀದಿದಾರರಲ್ಲಿ ಕ್ರಿಕೆಟ್‌ ಕುರಿತು ಆಸಕ್ತಿ ಹೆಚ್ಚಿಸಲು ಸಾಯಿ ಗೋಲ್ಡ್‌ ಪ್ಯಾಲೇಸ್‌, ವಿಶೇಷ ಕ್ರಿಕೆಟ್‌ ಕೊಡುಗೆ ಘೋಷಿಸಿದೆ.

ಆರ್‌ಸಿಬಿ ತಂಡ ಕಲೆಹಾಕುವ ರನ್‌ ಮತ್ತು ಪಡೆಯುವ ವಿಕೆಟ್‌ಗಳಿಗೆ ತಕ್ಕಂತೆ ಚಿನ್ನ ಖರೀದಿ ಮೇಲೆ ರಿಯಾಯ್ತಿ ನೀಡುವುದು ಈ ‘ಸಾಯಿ ಗೋಲ್ಡ್‌ ಲೀಗ್‌’ ಕೊಡುಗೆಯ ವಿಶೇಷತೆಯಾಗಿದೆ.

ಉದಾಹರಣೆಗೆ ತಂಡದ ರನ್‌ ಗಳಿಕೆ 200 ಆಗಿದ್ದರೆ ಪ್ರತಿ ಗ್ರಾಂ ಚಿನ್ನ ಖರೀದಿಯ ಮೇಲೆ ₹ 200 ರಿಯಾಯ್ತಿ ದೊರೆಯಲಿದೆ. ಮೊದಲು ಬೌಲಿಂಗ್‌ ಮಾಡಿ 10 ವಿಕೆಟ್‌ ಪಡೆದರೂ ಇಷ್ಟೇ ಮೊತ್ತದ ರಿಯಾಯ್ತಿ ಇರಲಿದೆ.

ತಂಡವು ಪಂದ್ಯ ಗೆದ್ದರೆ ಪೂರ್ಣ ಪ್ರಮಾಣದ ಕೊಡುಗೆ, ಸೋತರೆ ಅಥವಾ ಪಂದ್ಯ ಡ್ರಾ ಆದರೆ ಕೊಡುಗೆಯಲ್ಲಿ ಶೇ 50ರಷ್ಟು ಕಡಿತ ಇರಲಿದೆ. ‘ಪಂದ್ಯ ಮುಗಿದ ಮರುದಿನ ಮಾತ್ರ ಈ ಕೊಡುಗೆ ಇರಲಿದೆ’ ಎಂದು ಸಂಸ್ಥೆಯ ಮಾಲೀಕ ಟಿ. ಎ. ಶರವಣ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry