ಸೋಮವಾರ, ಆಗಸ್ಟ್ 10, 2020
26 °C

34 ಸಾವಿರ ಗಡಿದಾಟಿದ ಸಂವೇದಿ ಸೂಚ್ಯಂಕ

ಪಿಟಿಐ Updated:

ಅಕ್ಷರ ಗಾತ್ರ : | |

34 ಸಾವಿರ ಗಡಿದಾಟಿದ ಸಂವೇದಿ ಸೂಚ್ಯಂಕ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಆರನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಗುರುವಾರದ ವಹಿವಾಟಿನಲ್ಲಿ 34 ಸಾವಿರದ ಗಡಿ ದಾಟಿತು. ದಿನದ ವಹಿವಾಟಿನಲ್ಲಿ 161 ಅಂಶ ಏರಿಕೆ ಕಂಡು 34,101 ಅಂಶಗಳಿಗೆ ತಲುಪಿತು.

ಫೆಬ್ರುವರಿ 28ರ ನಂತರ (34,184) ದಿನದ ವಹಿವಾಟಿನಲ್ಲಿ ಸೂಚ್ಯಂಕದ ಗರಿಷ್ಠ ಮಟ್ಟ ಇದಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 41 ಅಂಶ ಹೆಚ್ಚಾಗಿ 10,458 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ತಂತ್ರಜ್ಞಾನ ವಲಯದ ಟಿಸಿಎಸ್‌, ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಮತ್ತು ಟೆಕ್‌ ಮಹೀಂದ್ರಾ ಷೇರುಗಳು ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದವು.

ರಿಯಲ್‌ ಎಸ್ಟೇಟ್‌, ಆರೋಗ್ಯಸೇವೆ, ವಿದ್ಯುತ್‌ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರುಗಳು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾದವು.

ಮೂಡೀಸ್‌ ವರದಿ: ಆರ್ಥಿಕ ಬೆಳವಣಿಗೆಯು ಸಂಪತ್ತು ಆಧರಿಸಿದ ಸಾಲಪತ್ರಗಳಿಗೆ ಸಕಾರಾತ್ಮಕವಾಗಿ ಪರಿಣಮಿಸಲಿದೆ. ಇದರಿಂದ ಸಾಲ ಪಡೆಯುವವರಿಗೆ ವರಮಾನ ಗಳಿಕೆ ಸಾಧ್ಯವಾಗಲಿದ್ದು, ಮರುಪಾವತಿಗೆ ಅನುಕೂಲವಾಗಲಿದೆ ಎಂದು ಹೂಡಿಕೆದಾರರ ಸಲಹಾ ಸಂಸ್ಥೆ ಮೂಡೀಸ್‌ ಹೇಳಿದೆ. ಇದು ಹೂಡಿಕೆದಾರರಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.