ಸಿರಿಯಾ ಮೇಲೆ ಯಾವಾಗ ಬೇಕಾದರೂ ಪ್ರತಿದಾಳಿ: ಟ್ರಂಪ್‌

7

ಸಿರಿಯಾ ಮೇಲೆ ಯಾವಾಗ ಬೇಕಾದರೂ ಪ್ರತಿದಾಳಿ: ಟ್ರಂಪ್‌

Published:
Updated:
ಸಿರಿಯಾ ಮೇಲೆ ಯಾವಾಗ ಬೇಕಾದರೂ ಪ್ರತಿದಾಳಿ: ಟ್ರಂಪ್‌

ವಾಷಿಂಗ್ಟನ್‌: ಸಿರಿಯಾದಲ್ಲಿನ ರಾಸಾಯನಿಕ ದಾಳಿಗೆ ಪ್ರತಿಯಾಗಿ ಯಾವಾಗ ಬೇಕಾದರೂ ದಾಳಿ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಗುರುವಾರ ತಿಳಿಸಿದ್ದಾರೆ.

‘ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸಲಿದೆ. ಇದು ಆದಷ್ಟು ಬೇಗ ಅಥವಾ ಇನ್ನಷ್ಟು ತಡವಾಗಬಹುದು. ಐಎಸ್‌ ಉಗ್ರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಅಮೆರಿಕ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ‘ಕ್ಷಿಪಣಿಗಳು ಬರಲಿವೆ’ ಎಂದು ಅವರು ಟ್ವೀಟ್‌ ಮೂಲಕ ಎಚ್ಚರಿಸಿದ್ದರು. ಸಿರಿಯಾದಲ್ಲಿನ ರಾಸಾಯನಿಕ ದಾಳಿಗೆ ಅಮೆರಿಕ ಪ್ರತ್ಯುತ್ತರ ನೀಡಲಿದೆ ಎಂದು ಟ್ರಂಪ್‌ ಮುನ್ಸೂಚನೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry