ಶುಕ್ರವಾರ, ಡಿಸೆಂಬರ್ 6, 2019
26 °C
ಇಂದು ನ್ಯೂಜಿಲೆಂಡ್‌ ಎದುರು ನಾಲ್ಕರ ಘಟ್ಟದ ಪೈಪೋಟಿ

ಹಾಕಿ: ಫೈನಲ್‌ ಕನಸಲ್ಲಿ ಮನ್‌ಪ್ರೀತ್‌ ಬಳಗ

Published:
Updated:
ಹಾಕಿ:  ಫೈನಲ್‌ ಕನಸಲ್ಲಿ ಮನ್‌ಪ್ರೀತ್‌ ಬಳಗ

ಗೋಲ್ಡ್‌ ಕೋಸ್ಟ್‌: ಭಾರತ ಪುರುಷರ ಹಾಕಿ ತಂಡವು ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಫೈನಲ್‌ ಪ್ರವೇಶಿಸುವ ಕನಸಿನಲ್ಲಿದೆ.

ಶುಕ್ರವಾರ ನಡೆಯುವ ಸೆಮಿಫೈನಲ್‌ ಹೋರಾಟದಲ್ಲಿ ಮನ್‌ಪ್ರೀತ್‌ ಸಿಂಗ್‌ ಬಳಗವು ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ.

ಗೋಲ್ಡ್‌ ಕೋಸ್ಟ್‌ ಹಾಕಿ ಕೇಂದ್ರದಲ್ಲಿ ನಡೆಯುವ ಈ ಪಂದ್ಯದಲ್ಲಿ ಭಾರತ ತಂಡ ಕಿವೀಸ್‌ ನಾಡಿನ ಪಡೆಯನ್ನು ಸುಲಭವಾಗಿ ಸೋಲಿಸುವ ಹುಮ್ಮಸ್ಸಿನಲ್ಲಿದೆ.

ಭಾರತ ತಂಡ ಕೂಟದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದು ರಾಳಿ ಪಾಕಿಸ್ತಾನದ ವಿರುದ್ಧ ಡ್ರಾ ಮಾಡಿ ಕೊಂಡಿತ್ತು. ನಂತರದ ಪಂದ್ಯಗಳಲ್ಲಿ ವೇಲ್ಸ್‌, ಮಲೇಷ್ಯಾ ಮತ್ತು ಇಂಗ್ಲೆಂಡ್‌ ತಂಡಗಳನ್ನು ಪರಾಭವಗೊಳಿಸಿ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಮನ್‌ಪ್ರೀತ್‌ ಪಡೆ ಕೊನೆಯ ನಾಲ್ಕು ನಿಮಿಷಗಳಲ್ಲಿ ಎರಡು ಗೋಲು ಗಳಿಸಿ ಗೆಲುವಿನ ತೋರಣ ಕಟ್ಟಿತ್ತು. ಆಂಗ್ಲರ ನಾಡಿನ ಎದುರು ಮಿಂಚಿದ್ದ ಮನ್‌ಪ್ರೀತ್‌, ರೂಪಿಂದರ್‌ ಪಾಲ್‌ ಸಿಂಗ್‌, ವರುಣ್ ಕುಮಾರ್‌ ಮತ್ತು ಮನ ದೀಪ್‌ ಸಿಂಗ್‌ ನ್ಯೂಜಿಲೆಂಡ್‌ ವಿರುದ್ಧವೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ಕರ್ನಾಟಕದ ಎಸ್‌.ವಿ.ಸುನಿಲ್‌, ಆಕಾಶ್‌ದೀಪ್‌ ಸಿಂಗ್, ಲಲಿತ್‌ ಕುಮಾರ್‌ ಉಪಾಧ್ಯಾಯ, ಗುರ್ಜಂತ್‌ ಸಿಂಗ್‌ ಮತ್ತು ದಿಲ್‌ಪ್ರೀತ್‌ ಸಿಂಗ್‌ ಅವರು ಮುಂಚೂಣಿ ವಿಭಾಗದಲ್ಲಿ ಭಾರತದ ಆಧಾರಸ್ತಂಭಗಳಾಗಿದ್ದಾರೆ.

ಕೊಥಾಜಿತ್‌ ಸಿಂಗ್‌, ಸುಮಿತ್‌, ಗುರಿಂದರ್‌ ಸಿಂಗ್‌, ಚಿಂಗ್ಲೆನ್‌ಸನಾ ಸಿಂಗ್‌, ಅಮಿತ್‌ ರೋಹಿದಾಸ್‌ ಮತ್ತು ವಿವೇಕ್‌ ಪ್ರಸಾದ್‌ ಅವರೂ ಕೈಚಳಕ ತೋರುವ ಕಾತರದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)