ಕಾಮಗಾರಿ ಕಳಪೆ: ಕಾಂಕ್ರಿಟ್‌ ರಸ್ತೆಗೆ ತೇಪೆ!

7

ಕಾಮಗಾರಿ ಕಳಪೆ: ಕಾಂಕ್ರಿಟ್‌ ರಸ್ತೆಗೆ ತೇಪೆ!

Published:
Updated:

ಕುಂದಗೋಳ: ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಕಳೆದ ವರ್ಷ ನಿರ್ಮಾಣವಾಗಿದ್ದ ಕಾಂಕ್ರಿಟ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದೀಗ ಅದೇ ರಸ್ತೆಗೆ ಪುನ: ಕಾಂಕ್ರಿಟ್ ತೇಪೆ ಹಾಕಲಾಗಿದೆ.

ಗ್ರಾಮದ ಜನತಾ ಪ್ಲಾಟ್‌ನಲ್ಲಿ 2016–17ನೇ ಸಾಲಿನಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗಿತ್ತು. ಕಾಮಗಾರಿ ಮುಗಿದ ಸ್ವಲ್ಪ ದಿನಗಳಲ್ಲೇ ರಸ್ತೆಯು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಇದೀಗ ₹ 7 ಲಕ್ಷ ಅನುದಾನದಲ್ಲಿ ಮೂರು ಇಂಚು ಕಾಂಕ್ರಿಟ್‌ ಹಾಕಲಾಗಿದೆ.‌ ‘ಕಾಂಕ್ರಿಟ್‌ ಕಿತ್ತು ಹೋಗಿರುವುದರಿಂದ ದುರಸ್ಥಿ ಮಾಡಲಾಗಿದೆ’ ಎಂದು ಗುತ್ತಿಗಾದಾರ ಡಿ.ಎಂ.ಆಡರಕಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry