ಭಾನುವಾರ, ಡಿಸೆಂಬರ್ 15, 2019
25 °C

ಬೇಸಿಗೆಗೆ ಕಡುನೀಲಿ ಬಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆಗೆ ಕಡುನೀಲಿ ಬಣ್ಣ

ಕಡು ನೀಲಿ ಬಣ್ಣಕ್ಕೆ ಮೇಕಪ್‌ ಲೋಕದಲ್ಲಿ ಹೆಚ್ಚು ಬೇಡಿಕೆ. ಫ್ಯಾಷನ್‌ ಸಮಾರಂಭಗಳಲ್ಲಿ, ಅದ್ದೂರಿ ಕಾರ್ಯಕ್ರಮಗಳಿರಲಿ ಸೆಲೆಬ್ರಿಟಿಗಳು ಕಡು ನೀಲಿ ಬಣ್ಣಕ್ಕೆ ಪ್ರಾಶಸ್ತ್ಯ ನೀಡುತ್ತಾರಂತೆ. ಫ್ಯಾಷನ್‌, ಮೇಕಪ್‌ ಲೋಕದಲ್ಲಿ ಸದ್ದು ಮಾಡುತ್ತಿರುವ ಕಡು ನೀಲಿ ಬಣ್ಣವನ್ನು 2018ರ ಬೇಸಿಗೆಯ ‘ಬೋಲ್ಡೆಸ್ಟ್‌ ಟ್ರೆಂಡ್‌ ಬಣ್ಣ’ ಎಂದು ಗುರುತಿಸಿದ್ದಾರೆ.

ನೀಲಿ ಬಣ್ಣದ ದಿರಿಸು ಎಲ್ಲರಿಗೂ ಇಷ್ಟ. ಆದರೆ ಈಗ ವಸ್ತ್ರದಿಂದ ಐಶ್ಯಾಡೊ, ತುಟಿ ರಂಗು ಹಾಗೂ ಉಗುರಿಗೂ ನೀಲಿ ಬಣ್ಣ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿದೆ. ಇದರಲ್ಲೂ ನೀಲಿ ಬಣ್ಣ ಐಶ್ಯಾಡೋ, ಐಲೈನರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್‌ಸ್ಟಾಗ್ರಾಂಗಳಲ್ಲೂ ನೀಲಿ ಬಣ್ಣದ ಮೇಕಪ್‌ಗಳ ಟ್ರೆಂಡ್‌ ಹಬ್ಬಿದೆ.

‘ಫ್ಯಾಷನ್‌ ಪ್ರಿಯರಾಗಿದ್ದಲ್ಲಿ ಈ ವರ್ಷದ ಬೇಸಿಗೆಗೆ ಕಡು ನೀಲಿ ಬಣ್ಣ ಆಯ್ಕೆ ಮಾಡಿಕೊಳ್ಳಿ. ನೀಲಿ ಧಿರಿಸು, ಕೇಶರಾಶಿಗೂ, ಉಗುರಿಗೂ, ಕಣ್ಣಿಗೆ ಕಾಡಿಗೆ, ಐಲೈನರ್‌ಗಳೂ ನೀಲಿ ಬಣ್ಣ... ಹೀಗಿದ್ದಾಗ ಏನೂ ಅಂಜಿಕೆ ಪಡಬೇಕಿಲ್ಲ. ಇದೇ 2018ರ ಬೋಲ್ಡೆಸ್ಟ್‌ ಟ್ರೆಂಡ್‌, ಸ್ಟೈಲಿಷ್‌ ಲುಕ್‌ ನಿಮ್ಮದಾಗುತ್ತದೆ’ ಎನ್ನುತ್ತಾರೆ ಫ್ಯಾಷನ್‌ ಲೋಕದ ಹಿರಿಯ ತಜ್ಞ ಫ್ಯಾಟ್‌ ಮೆಕ್‌ಗ್ರತ್.

ಕಡು ನೀಲಿ ಬಣ್ಣ ಬೇಸಿಗೆಗೆ ಯಾವ ಫ್ಯಾಷನ್‌ಗಾದರೂ ಸರಿ ಹೊಂದುತ್ತದೆ. ಅಲ್ಲದೇ ಇದು ಶ್ರೀಮಂತ ಲುಕ್‌ ನೀಡುತ್ತದೆ. ನೀಲಿ ಬಣ್ಣದ ವಿವಿಧ ಶೇಡ್‌ಗಳನ್ನು ಬಳಸಿ ಅಲಂಕಾರ ಮಾಡಿಕೊಳ್ಳಬಹುದು. ಕಾಲೇಜು ಹುಡುಗಿಯರಿಗೆ ಈ ಬಣ್ಣ ಸೂಕ್ತ ಎಂದು ಹೇಳುತ್ತದೆ ಫ್ಯಾಷನ್‌ ಲೋಕ. 

ಪ್ರತಿಕ್ರಿಯಿಸಿ (+)