ಶನಿವಾರ, ಡಿಸೆಂಬರ್ 7, 2019
24 °C

ಮತದಾನ ಕಡ್ಡಾಯಗೊಳಿಸಬೇಕು

Published:
Updated:
ಮತದಾನ ಕಡ್ಡಾಯಗೊಳಿಸಬೇಕು

ಜಗತ್ತಿನಲ್ಲಿರುವ ವ್ಯವಸ್ಥೆಗಳಲ್ಲಿ ಅತ್ಯುತ್ತಮವಾದದ್ದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಭಾರತದಲ್ಲಿ ಅನಕ್ಷರಸ್ಥರು, ಭಿನ್ನ ವೈಚಾರಿಕತೆ ಹೊಂದಿರುವವರು ಇದ್ದಾರೆ. ಅವರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನಗಳು ನಡೆಯುತ್ತವೆ. ಇಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕಾದರೆ, ಎಲ್ಲರೂ ಮತ ಹಾಕಬೇಕು.

ಗರಿಷ್ಠ ಮತದಾನ ಆಗಬೇಕು. ಆದರೆ, ಶೇ 50ರಷ್ಟು ಮತದಾನವಾಗಿ, ಅದರಲ್ಲಿ ಶೇ 30 ಅಥವಾ ಶೇ 40ರಷ್ಟು ಮತ ಪಡೆದವರು ಅಧಿಕಾರಕ್ಕೆ ಬರುತ್ತಾರೆ. ಅವರು ಇಡೀ ಸಮುದಾಯವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ.

ಮತದಾನವನ್ನು ಕಡ್ಡಾಯಗೊಳಿಸಬೇಕು. ಹಾಗೆ ನೋಡಿದರೆ, ದೇಶದಲ್ಲಿ ಎಷ್ಟೋ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜತೆಗೆ, ಆದ್ಯತಾ ಮತದಾನದ ಪದ್ಧತಿ ಜಾರಿಗೆ ತರಬೇಕು. ಅಂದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಶೇ 50ಕ್ಕಿಂತ ಹೆಚ್ಚಿನ ಮತ ಪಡೆಯಬೇಕು. ಇಲ್ಲದಿದ್ದರೆ ಅವರನ್ನು ಆಯ್ಕೆ ಮಾಡಲೇಬಾರದು.

ಇಂಗ್ಲೆಂಡ್‌ನ ಚುನಾವಣಾ ಪದ್ಧತಿಯನ್ನು ನಾವು ಅನುಸರಿಸುತ್ತಿದ್ದೇವೆ. ಅದು ಚಿಕ್ಕ ರಾಷ್ಟ್ರ. ಒಂದೇ ಭಾಷೆ, ಒಂದೇ ಧರ್ಮ. ಆದರೆ, ಭಾರತದಲ್ಲಿ ಅನೇಕ ಭಾಷೆ, ಧರ್ಮಗಳು ಇವೆ. ಹೀಗಾಗಿ, ನಮ್ಮ ದೇಶಕ್ಕೆ ಸೂಕ್ತವಾಗುವ ಚುನಾವಣಾ ಪದ್ಧತಿ ಅಗತ್ಯವಿದೆ.

-ಡಾ. ಕೆ.ಮರುಳಸಿದ್ಧಪ್ಪ, ವಿಮರ್ಶಕ

ಪ್ರತಿಕ್ರಿಯಿಸಿ (+)