ಟಿಕೆಟ್ ಪರೀಕ್ಷಕನನ್ನು ರೈಲಿನಿಂದ ಹೊರ ತಳ್ಳಿದ ಯುವಕರು

7

ಟಿಕೆಟ್ ಪರೀಕ್ಷಕನನ್ನು ರೈಲಿನಿಂದ ಹೊರ ತಳ್ಳಿದ ಯುವಕರು

Published:
Updated:

ಚೆನ್ನೈ: ದಂಡ ಕಟ್ಟಲು ಸೂಚಿಸಿದ ಟಿಕೆಟ್ ಪರೀಕ್ಷಕರನ್ನು ಪ್ರಯಾಣಿಕರ ಗುಂಪೊಂದು ರೈಲಿನಿಂದ ಹೊರದಬ್ಬಿದೆ.

ಯಶವಂತಪುರ– ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಎಸ್‌–12 ಕೋಚ್‌ನಲ್ಲಿ ಇಬ್ಬರು ಪ್ರಯಾಣಿಕರು ಸರಿಯಾದ ಗುರುತಿನ ದಾಖಲೆ ಹೊಂದಿರದ ಕಾರಣ ದಂಡ ಪಾವತಿಸಲು ಟಿಕೆಟ್ ಪರೀಕ್ಷಕ ಕೇಳಿದ್ದಾರೆ. ಇದರಿಂದ ಕುಪಿತಗೊಂಡು ಗುಂಪು ಟಿಕೆಟ್ ಪರೀಕ್ಷಕರನ್ನು ತಮಿಳುನಾಡಿನ ಕಟಪಾಡಿ ಜಂಕ್ಷನ್ ಬಳಿ ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದೆ. ಬೆಂಗಳೂರಿನ ಟಿಕೆಟ್ ಪರೀಕ್ಷಕ ಸಂತೋಷ್‌ ಕುಮಾರ್ ಗಾಯ

ಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವಕರ ಗುಂಪು ಹಲ್ಲೆ ನಡೆಸಿದೆ. ರೈಲು ನಿಧಾನವಾಗಿ ಚಲಿಸುತ್ತಿತ್ತು. ಹಾಗಾಗಿ ಹೆಚ್ಚಿನ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry