ಶನಿವಾರ, ಡಿಸೆಂಬರ್ 14, 2019
20 °C

6 ವಾರಗಳ ಗರಿಷ್ಠ ಮಟ್ಟಕ್ಕೆ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

6 ವಾರಗಳ ಗರಿಷ್ಠ ಮಟ್ಟಕ್ಕೆ ವಹಿವಾಟು

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಮೂರನೇ ವಾರವೂ ವಹಿವಾಟು ಏರಿಕೆ ಕಂಡಿದೆ.

ಮಾರ್ಚ್‌ ತಿಂಗಳ ಚಿಲ್ಲರೆ ಹಣದುಬ್ಬರ ಇಳಿಕೆ ಕಂಡಿದ್ದು, ಫೆಬ್ರುವರಿ ತಿಂಗಳ ಕೈಗಾರಿಕಾ ಪ್ರಗತಿ ಏರಿಕೆ ಕಂಡಿದೆ. ಇದು ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.

ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಗಳ ಸಾಧನೆ ಉತ್ತಮವಾಗಿರಲಿದೆ ಎನ್ನುವ ನಿರೀಕ್ಷೆಯೂ ಹೂಡಿಕೆ ಚಟುವಟಿಕೆ ಹೆಚ್ಚಾಗುವಂತೆ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಶುಕ್ರವಾರ 91 ಅಂಶ ಏರಿಕೆ ಕಂಡು ಆರು ವಾರಗಳ ಗರಿಷ್ಠ ಮಟ್ಟವಾದ 34,192 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ‍ಫೆಬ್ರುವರಿ 27 ರಂದು 34,346 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 21 ಅಂಶ ಹೆಚ್ಚಾಗಿ 10,480 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಪ್ರತಿಕ್ರಿಯಿಸಿ (+)