ಹೀರೊ ಇಂಡಿಯನ್ಸ್‌ ವುಮೆನ್ಸ್‌ ಲೀಗ್‌: ಫೈನಲ್‌ ಪಂದ್ಯ ಇಂದು

7

ಹೀರೊ ಇಂಡಿಯನ್ಸ್‌ ವುಮೆನ್ಸ್‌ ಲೀಗ್‌: ಫೈನಲ್‌ ಪಂದ್ಯ ಇಂದು

Published:
Updated:

ಶಿಲ್ಲಾಂಗ್‌: ಎರಡನೆ ಆವೃತ್ತಿಯ ಹೀರೊ ಇಂಡಿಯನ್‌ ಮಹಿಳೆಯರ ಫುಟ್‌ಬಾಲ್‌ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಈಸ್ಟರ್ನ್‌ ಸ್ಪೋರ್ಟಿಂಗ್‌ ಯುನಿಯನ್‌ ತಂಡವು ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ ತಂಡದೊಂದಿಗೆ ಸೆಣಸಲಿದೆ.

ಪಂದ್ಯವು ಇಲ್ಲಿನ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದೆ.

ಕೆಎಚ್‌ಆರ್‌ವೈಪಿಎಸ್‌ಎ ತಂಡದ ವಿರುದ್ಧ 4–3ರ ಅಂತರದಿಂದ ರೋಚಕ ಜಯ ಗಳಿಸಿದ ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ ತಂಡವು ಫೈನಲ್‌ನಲ್ಲಿ ಜಯ ದಾಖಲಿಸುವ ವಿಶ್ವಾಸದಲ್ಲಿದೆ. ಇನ್ನೂ ಹಾಲಿ ಚಾಂಪಿಯನ್‌ ಆಗಿರುವ ಈಸ್ಟರ್ನ್‌ ಸ್ಪೋರ್ಟಿಂಗ್‌ ತಂಡವು ಟೂರ್ನಿಯುದ್ದಕ್ಕೂ ಅಮೋಘ ಸಾಮರ್ಥ್ಯ ಮೆರೆದಿದ್ದು, ಎದುರಾಳಿ ಪಡೆಯ ಸವಾಲು ಮೀರುವ ಭರವಸೆಯಲ್ಲಿದೆ.

‘ನಮ್ಮ ತಂಡ ಅನೇಕ ಸ್ತರಗಳಲ್ಲಿ ಗುಣಮಟ್ಟ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಆಟ ಆಡಿದೆ. ಎದುರಾಳಿ ತಂಡ ಬಲಿಷ್ಠವಾಗಿದೆ. ಆದರೆ, ಗೆಲ್ಲಲೇಬೇಕು ಎಂಬ ಛಲದಿಂದ ನಮ್ಮ ತಂಡ ಅಂಗಳಕ್ಕಿಳಿಯಲಿದೆ’ ಎಂದು ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ನ ಮುಖ್ಯ ಕೋಚ್‌ ಶುಕ್ಲಾ ದತ್ತಾ ಹೇಳಿದ್ದಾರೆ.

ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ ತಂಡವು ಉತ್ತಮ ಸಾಮರ್ಥ್ಯ ತೋರಿಸುತ್ತಿರುವ ಫಾರ್ವರ್ಡ್‌ ಆಟಗಾರ್ತಿ ಪ್ಯಾರಿ ಕ್ಸಾಕ್ಸಾ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಇನ್ನೂ, ಈಸ್ಟರ್ನ್‌ ಸ್ಪೋರ್ಟಿಂಗ್‌ ಯುನಿಯನ್‌ ತಂಡದವರು ತಮ್ಮ ಎಂದಿನ ವೇಗದ ಆಟವನ್ನು ಈ ಪಂದ್ಯದಲ್ಲೂ ಮುಂದುವರಿಸಲು ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry