ಶುಕ್ರವಾರ, ಡಿಸೆಂಬರ್ 13, 2019
19 °C

ಇಬ್ಬರು ಅಥ್ಲೀಟ್‌ಗಳನ್ನು ವಾಪಸ್ ಕಳುಹಿಸಿದ ಆಯೋಜಕರು

ಪಿಟಿಐ Updated:

ಅಕ್ಷರ ಗಾತ್ರ : | |

ಇಬ್ಬರು ಅಥ್ಲೀಟ್‌ಗಳನ್ನು ವಾಪಸ್ ಕಳುಹಿಸಿದ ಆಯೋಜಕರು

ಗೋಲ್ಡ್ ಕೋಸ್ಟ್‌: ಕಾಮನ್‌ವೆಲ್ತ್ ಕೂಟದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣದಿಂದ ಭಾರತದ ವೇಗದ ನಡಿಗೆ ಅಥ್ಲೀಟ್‌ ಕೆ.ಟಿ.ಇರ್ಫಾನ್ ಮತ್ತು ಟ್ರಿಪಲ್ ಜಂಪ್‌ ಕ್ರೀಡಾಪಟು ವಿ.ರಾಕೇಶ್‌ ಬಾಬು ಅವರನ್ನು ವಾಪಸ್ ಕಳುಹಿಸಲಾಗಿದೆ.

ಉದ್ದೀಪನ ಮದ್ದು ಸೇವನೆ ಪ್ರಕರಣಗಳಿಂದ ದೂರ ಉಳಿಯುವುದಕ್ಕಾಗಿ ಕೂಟದ ಆಯೋಜಕರು ‘ಸಿರಿಂಜ್ ಬಳಕೆ ನಿಷೇಧ’ ನಿಯಮವನ್ನು ಜಾರಿಗೊಳಿಸಿದ್ದರು.

(ರಾಕೇಶ್ ಬಾಬು)

ಭಾರತದ ಈ ಇಬ್ಬರು ಇದನ್ನು ಪಾಲಿಸಿಲ್ಲ ಎಂದು ದೂರಿ ವಾಪಸ್ ಕಳುಹಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಮನವಿಗೆ ಆಯೋಜಕರು ಸ್ಪಂದಿಸಲಿಲ್ಲ.

ಮಾತ್ರವಲ್ಲದೆ ತಂಡದ ಅಧಿಕಾರಿಗಳಾದ ವಿಕ್ರಂ ಸಿಂಗ್ ಸಿಸೋಡಿಯಾ, ನಾಮದೇವ ಶಿರ್ಗಾಂವ್ಕರ್ ಮತ್ತು ರವೀಂದ್ರ ಚೌಧರಿ ಅವರಿಗೆ ಎಚ್ಚರಿಕೆ ನೀಡಿದ್ದರು.

ಪ್ರತಿಕ್ರಿಯಿಸಿ (+)