ಗುರುವಾರ , ಡಿಸೆಂಬರ್ 12, 2019
20 °C

ಬಾಕ್ಸಿಂಗ್‌: ಭಾರತದ ಮೂವರಿಗೆ ಕಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಕ್ಸಿಂಗ್‌: ಭಾರತದ ಮೂವರಿಗೆ ಕಂಚು

ಗೋಲ್ಡ್ ಕೋಸ್ಟ್‌: ಮೂರು ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದ ಭಾರತದ ಬಾಕ್ಸರ್‌ಗಳು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶುಕ್ರವಾರ ಮಿಂಚಿದರು.

ಪುರುಷರ 91 ಕೆ.ಜಿ ವಿಭಾಗದಲ್ಲಿ ನಮನ್ ತನ್ವರ್‌, 69 ಕೆ.ಜಿ ವಿಭಾಗದಲ್ಲಿ ಮನೋಜ್ ಕುಮಾರ್ ಮತ್ತು 56 ಕೆ.ಜಿ ವಿಭಾಗದಲ್ಲಿ ಹಸಮುದ್ದೀನ್ ಮಹಮ್ಮದ್ ಕಂಚಿಗೆ ಕೊರಳೊಡ್ಡಿದರು. ಅಮಿತ್ ಫಂಗಲ್‌, ಗೌರವ್ ಸೋಲಂಕಿ ಮತ್ತು ಮನೀಷ್ ಕೌಶಿಕ್‌ ವಿವಿಧ ವಿಭಾಗಗಳಲ್ಲಿ ಫೈನಲ್‌ಗೆ ಪ್ರವೇಶಿಸಿ ಭರವಸೆ ಮೂಡಿಸಿದ್ದಾರೆ.

ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಹಸಮುದ್ದೀನ್‌ ಇಂಗ್ಲೆಂಡ್‌ನ ಪೀಟರ್ ಮೆಕ್‌ಗ್ರೆಲ್ ಅವರನ್ನು ಮಣಿಸಿದರು. ಮನೋಜ್ ಕುಮಾರ್‌ ಇಂಗ್ಲೆಂಡ್‌ನ ಪ್ಯಾಟ್‌ ಮೆಕ್ರೊಮ್ಯಾಕ್ಸ್‌ ಅವರನ್ನು ಮತ್ತು ನಮನ್ ತನ್ವರ್‌ ಆಸ್ಟ್ರೇಲಿಯಾದ ಜೇಸನ್ ವ್ಯಾಟ್ಲಿ ಅವರನ್ನು ಸೋಲಿಸಿದರು.

ಜೇಮ್ಸ್‌ಗೆ ಸೋಲುಣಿಸಿದ ಮನೀಷ್‌: 60 ಕೆ.ಜಿ ವಿಭಾಗದಲ್ಲಿ ನಾರ್ಥರ್ನ್‌ ಐರ್ಲೆಂಡ್‌ನ ಜೇಮ್ಸ್‌ ಮೆಕ್‌ಗಿವರ್ನ್ ಅವರನ್ನು 4–1ರಿಂದ ಮಣಿಸಿದ ಮನೀಷ್‌ ಫೈನಲ್‌ ಪ್ರವೇಶಿಸಿದರು. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವರು ಇಲ್ಲಿ ಎದುರಾಳಿಯನ್ನು ನಿರಾತಂಕವಾಗಿ ಎದುರಿಸಿದರು. 52 ಕೆ.ಜಿ ವಿಭಾಗದಲ್ಲಿ ಗೌರವ್‌ ಶ್ರೀಲಂಕಾದ ಎಂ.ಇಶಾನ್‌ ಬಂಡಾರ ಎದುರು ಗೆದ್ದರು.

ಪ್ರತಿಕ್ರಿಯಿಸಿ (+)