ಶನಿವಾರ, ಡಿಸೆಂಬರ್ 14, 2019
20 °C

ಲಿಂಗತ್ವ ಅಲ್ಪಸಂಖ್ಯಾತರಿಗೆ ವಾಕ್ ಸ್ವಾತಂತ್ರ್ಯ ಬೇಕು : ಅಕ್ಕೈ ಪದ್ಮಸಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗತ್ವ ಅಲ್ಪಸಂಖ್ಯಾತರಿಗೆ ವಾಕ್ ಸ್ವಾತಂತ್ರ್ಯ ಬೇಕು : ಅಕ್ಕೈ ಪದ್ಮಸಾಲಿ

ಬೆಂಗಳೂರು: ‘ನಮ್ಮ ಸಮುದಾಯಕ್ಕೆ ಸಮಾನತೆ ಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವಾಕ್ ಸ್ವಾತಂತ್ರ್ಯ ಬೇಕು’ ಎಂದು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಪ್ರತಿನಿಧಿ ಅಕ್ಕೈ ಪದ್ಮಸಾಲಿ ಒತ್ತಾಯಿಸಿದರು.

ನಗರದಲ್ಲಿ ಆಯೋಜಿಸಲಾಗಿರುವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಾನೂನು ಕುರಿತ ಎರಡು ದಿನಗಳ 23ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರದ ನೀತಿ ರಚನೆಯಲ್ಲಿ ನಮ್ಮ ಸಮುದಾಯದ ಪ್ರತಿನಿಧಿಯೇ ಇಲ್ಲ. ಆರ್ಥಿಕ ವಹಿವಾಟುಗಳಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಬ್ಯಾಂಕುಗಳಲ್ಲಿ ನಮಗೆ ಸಾಲ ಕೊಡುವುದಿಲ್ಲ’ ಎಂದು ಅಳಲು ತೋಡಿಕೊಂಡರು.

ಈ ಸಮ್ಮೇಳನದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಖಾಸಗಿತನ, ಘನತೆಯನ್ನು ಸಾಂವಿಧಾನಿಕ ಪರಿಧಿಯಲ್ಲಿ ಕಾಪಾಡಲು ಏನೆಲ್ಲಾ ಅವಕಾಶಗಳಿವೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಕಾನೂನಿನ ರಕ್ಷಣೆ ಇಲ್ಲವಾದಾಗಲೇ ಈ ಸಮುದಾಯಕ್ಕೆ ರಕ್ಷಣೆಯ ಕೊರತೆ ಎದುರಾಗುತ್ತದೆ ಎಂಬ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)