ಶನಿವಾರ, ಡಿಸೆಂಬರ್ 14, 2019
20 °C
ಅಮೆರಿಕ, ಫ್ರಾನ್ಸ್‌, ಬ್ರಿಟನ್‌ಗೆ ರಷ್ಯಾ ತಿರುಗೇಟು

ಸಿರಿಯಾ ಮೇಲಿನ ದಾಳಿಯ ಪರಿಣಾಮ ಎದುರಿಸಬೇಕಾಗುತ್ತದೆ : ರಷ್ಯಾ ಎಚ್ಚರಿಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಿರಿಯಾ ಮೇಲಿನ ದಾಳಿಯ ಪರಿಣಾಮ ಎದುರಿಸಬೇಕಾಗುತ್ತದೆ : ರಷ್ಯಾ ಎಚ್ಚರಿಕೆ

ನವದೆಹಲಿ : ಸಿರಿಯಾದಲ್ಲಿ ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ರಷ್ಯಾ ಖಾರವಾಗಿ ಪ್ರತಿಕ್ರಿಯಿಸಿದೆ. ಈ ಕಾರ್ಯಾಚರಣೆಯ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದಲ್ಲಿನ ರಷ್ಯಾ ರಾಯಭಾರಿ ಅನಟೊಲಿ ಅಂತನೊವ್‌ ತಿಳಿಸಿದ್ದಾರೆ.

ಟ್ವಿಟರ್‌ ಮೂಲಕ ಹೇಳಿಕೆ ನೀಡಿರುವ ಅವರು, ‘ಪೂರ್ವಯೋಜಿತ ಸನ್ನಿವೇಶ ಸೃಷ್ಟಿಸುವ ಪ್ರಯತ್ನ ಜಾರಿಯಲ್ಲಿದೆ. ಮತ್ತೆ, ನಮ್ಮನ್ನು ಕೆಣಕಲಾಗುತ್ತಿದೆ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಾವು ಈಗಾಗಲೇ ಎಚ್ಚರಿಸಿದ್ದೇವೆ’ ಎಂದಿದ್ದಾರೆ.

‘ಈ ಕಾರ್ಯಾಚರಣೆಯಿಂದ ವಾಷಿಂಗ್ಟನ್, ಲಂಡನ್‌ ಮತ್ತು ಪ್ಯಾರೀಸ್‌ನೊಂದಿಗಿನ ಸಂಬಂಧಗಳು ಹದಗೆಡಲಿವೆ. ರಾಸಾಯನಿಕ ಶಸ್ತ್ರಾಸ್ತ್ರಗಳ ದೊಡ್ಡ ಮಾಲೀಕನಾದ ಅಮೆರಿಕ ಇದಕ್ಕೆ ಬೇರೆ ದೇಶಗಳನ್ನು ದೂಷಿಸುವ ನೈತಿಕತೆ ಹೊಂದಿಲ್ಲ’ ಎಂಬ ಕಟುವಾದ ಸಾಲುಗಳನ್ನು ಅವರು ಉಲ್ಲೇಖಿಸಿದ್ದಾರೆ.

ಅಲ್ಲದೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನು ಹಿಯಾಳಿಸುವುದನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.

ಸಿರಿಯಾದ ಅಧ್ಯಕ್ಷ ಬಷರ್‌ ಅಲ್‌–ಅಸ್ಸದ್‌ ಡಮಾಸ್ಕಸ್‌ನ ಉಪನಗರ ಮೇಲೆ ಏ.7ರಂದು ನಡೆಸಿದ ದಾಳಿಗೆ ಪ್ರತ್ಯುತ್ತರ ನೀಡಲು ಈ ಮೂರು ದೇಶಗಳು ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.

ಪ್ರತಿಕ್ರಿಯಿಸಿ (+)