ಶುಕ್ರವಾರ, ಡಿಸೆಂಬರ್ 13, 2019
19 °C

ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ವಿಜ್ಞಾನ ಪರಿಚಯದ ಕೆಲವು ಪ್ರಶ್ನೆಗಳು

1. ಮನುಷ್ಯರ ಹಾವಳಿಯಿಂದಾಗಿ ಈಗ್ಗೆ 350 ವರ್ಷಗಳ ಹಿಂದೆಯೇ ಸಂಪೂರ್ಣ ವಿನಾಶಗೊಂಡು, ಇಂದಿಗೂ ಮಾನವ ಮೂಲ ವಿನಾಶದ ಪ್ರತಿಮಾ ಸ್ವರೂಪಿಯಾಗಿ ಪ್ರಸಿದ್ಧವಾಗಿರುವ ಹಕ್ಕಿ ಚಿತ್ರ-1ರಲ್ಲಿದೆ.

ಅ. ಈ ಹಕ್ಕಿಯ ಹೆಸರೇನು? ಬ. ಈ ಹಕ್ಕಿಯ ನೈಸರ್ಗಿಕ ನೆಲೆಯಾಗಿದ್ದ ದ್ವೀಪ ಯಾವುದು?

2. ಮೃದ್ವಂಗಿ ವರ್ಗಕ್ಕೆ ಸೇರಿದ ಒಂದು ವಿಸ್ಮಯಕರ ಪ್ರಭೇದ ‘ನಾಟಿಲಸ್’ ಚಿತ್ರ-2ರಲ್ಲಿದೆ. ಸುರುಳಿ ಚಿಪ್ಪಿನ ಈ ಜೀವಿ ಮೃದ್ವಂಗಿಗಳ ಯಾವ ಕುಟುಂಬಕ್ಕೆ ಸೇರಿದೆ ಗೊತ್ತೇ?

ಅ. ಗ್ಯಾಸ್ಟ್ರೋಪೋಡಾ→ಬ. ಸೆಫಲೋಪೋಡಾ ಕ. ಬೈವಾಲ್ವಿಯಾ ಡ. ಸ್ಕೇಫೋಪೋಡಾ

3. ಪುರಾತನ ಕಾಲದ, ಗೋಪುರಾಕಾರದ, ಬೃಹದ್ಗಾತ್ರದ ವಿಶಿಷ್ಟ ಗಗನಚುಂಬಿ ದೇವಾಲಯ ವಾಸ್ತುಶಿಲ್ಪ ‘ಜಿಗುರಾಟ್’ ಚಿತ್ರ-3ರಲ್ಲಿದೆ. ಪ್ರಸ್ತುತ ಭಗ್ನಾವಶೇಷ ರೂಪದಲ್ಲಷ್ಟೇ ಕಾಣಸಿಗುವ ಈ ವಿಶ್ವ ವಿಖ್ಯಾತ ಪ್ರಾಚೀನ ನಿರ್ಮಿತಿ ಯಾವ ಪ್ರದೇಶದಲ್ಲಿದೆ?

ಅ. ಈಜಿಪ್ಟ್ ಬ. ಮಧ್ಯ ಅಮೆರಿಕ ಕ. ಬರ್ಮಾ (ಮ್ಯಾನ್ಮಾರ್) ಡ. ಮೆಸಪೊಟೋಮಿಯಾ

4. ನಮ್ಮ ಸೌರವ್ಯೂಹದಲ್ಲಿ ಬಹುಕಾಲ ಗ್ರಹ ಸ್ಥಾನವನ್ನೇ ಪಡೆದಿದ್ದು, ಕೆಲ ವರ್ಷಗಳ ಹಿಂದೆ ಆ ಸ್ಥಾನದಿಂದ ಪದಚ್ಯುತಿಗೊಂಡ ಕಾಯ ‘ಪ್ಲೂಟೋ’. ಅದು ತನ್ನ ಒಂದು ಚಂದ್ರನೊಡನೆ ಇರುವ ಚಿತ್ರ-4ರಲ್ಲಿದೆ. ಪ್ರಸ್ತುತ ಪ್ಲೂಟೋ ಈ ಕೆಳಗಿನ ಯಾವ ಸ್ಥಾನದಲ್ಲಿದೆ?

ಅ. ಕ್ಷುದ್ರ ಗ್ರಹ ಬ. ಉಪಗ್ರಹ ಕ. ಕುಬ್ಜ ಗ್ರಹ ಡ. ಭೌಮಿಕ ಗ್ರಹ

5. ರಕ್ತ ವರ್ಣದ, ಸುಂದರ ರೂಪದ, ಅಮೂಲ್ಯ ರತ್ನವಾದ ‘ಕೆಂಪು’ (ರೂಬಿ) ಚಿತ್ರ-5ರಲ್ಲಿರುವ ಆಭರಣದಲ್ಲಿದೆ.

ಅ. ‘ಕೆಂಪು’ (ರೂಬಿ) ಯಾವ ಖನಿಜದಿಂದ ಮೈದಳೆವ ರತ್ನ? ಬ. ಈ ರತ್ನಕ್ಕೆ ಕೆಂಪು ಬಣ್ಣ ಒದಗಲು ಕಾರಣವಾಗುವ ಲೋಹಾಂಶ ಯಾವುದು?

6. ಜೀವಲೋಕದ ಒಂದು ವಿಶಿಷ್ಟ ನಿರ್ಮಿತಿಯಾದ ‘ಸಂಯುಕ್ತಾಕ್ಷಿ’ಯ ವಿಸ್ತೃತ ಸ್ವರೂಪ ಚಿತ್ರ-6ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿರುವ ಯಾವ ಯಾವ ವರ್ಗದ ಜೀವಿಗಳು ಇಂಥ ಕಣ್ಣುಗಳನ್ನು ಪಡೆದಿವೆ?

ಅ. ಮತ್ಸ್ಯಗಳು →ಬ. ಉಭಯವಾಸಿಗಳು ಕ. ಮೃದ್ವಂಗಿಗಳು →ಡ. ಕೀಟಗಳು ಇ. ಸರೀಸೃಪಗಳು ಈ. ಚಿಪ್ಪಿನ ಜೀವಿಗಳು (ಕ್ರಸ್ಟೇಶಿಯನ್ಸ್)

7. ವಿಶೇಷ ಉಡುಪು ‘ಸ್ಪೇಸ್ ಸೂಟ್’ ಧರಿಸಿ ವ್ಯೋಮ ಯಾನಕ್ಕೆ ಸಿದ್ಧವಾಗಿರುವ ಗಗನ ಯಾತ್ರಿಯನ್ನು ಚಿತ್ರ-7ರಲ್ಲಿ ನೋಡಿ. ಈವರೆಗೆ ಒಟ್ಟು ಎಷ್ಟು ಜನ ವ್ಯೋಮ ಯಾತ್ರಿಗಳು ನಮ್ಮ ಚಂದ್ರನ ಮೇಲಿಳಿದು, ಚಂದ್ರನ ನೆಲದ ಮೇಲೆ ಸಂಚರಿಸಿ ಬಂದಿದ್ದಾರೆ?

ಅ. ಆರು ಬ. ಹನ್ನೆರಡು ಕ. ಹದಿನೆಂಟು ಡ.ಇಪ್ಪತ್ಮೂರು

8. ಗಾಢ ವರ್ಣ ಚಿತ್ತಾರಗಳ ಚರ್ಮ ಪಡೆದು, ತನ್ಮೂಲಕ ತಮ್ಮ ಉಗ್ರ ವಿಷಭರಿತ ಗುಣವನ್ನು ಪ್ರದರ್ಶಿಸುತ್ತ ಶತ್ರುಗಳನ್ನು ಎಚ್ಚರಿಸುವ ಸುಪ್ರಸಿದ್ಧ ವಿಷಗಪ್ಪೆಗಳಾದ ‘ಆರೋ ಪಾಯ್ಸನ್ ಫ್ರಾಗ್’ಗಳ ಒಂದು ಪ್ರಭೇದ ಚಿತ್ರ-8ರಲ್ಲಿದೆ. ಇಂಥ ಕಪ್ಪೆಗಳ ನೈಸರ್ಗಿಕ ನೆಲೆ ಈ ಕೆಳಗಿನ ಯಾವ ಪ್ರದೇಶಕ್ಕೆ ಸೀಮಿತವಾಗಿದೆ?

ಅ. ಮಧ್ಯ ಮತ್ತು ದಕ್ಷಿಣ ಅಮೆರಿಕದ ವೃಷ್ಟಿ ವನ ಬ. ಆಫ್ರಿಕಾದ ಹುಲ್ಲು ಬಯಲು ಕ. ಉತ್ತರ ಅಮೆರಿಕದ ಮರುಭೂಮಿ ಡ. ಏಷ್ಯಾದ ಮಳೆಕಾಡುಗಳು

9. ವಲಸೆ ಯಾನ ಕೈಗೊಂಡಿರುವ ಹಕ್ಕಿಗಳ ಗುಂಪೊಂದು ಚಿತ್ರ-9ರಲ್ಲಿದೆ. ಹಕ್ಕಿಗಳಲ್ಲಿ ಪ್ರಸ್ತುತ ಸಮೀಪ ಹತ್ತು ಸಾವಿರ ಪ್ರಭೇದಗಳಿವೆ. ಅವುಗಳಲ್ಲಿ ನಮ್ಮ ದೇಶಕ್ಕಷ್ಟೇ ಸೀಮಿತವಾಗಿರುವ ಹಕ್ಕಿ ಪ್ರಭೇದಗಳ ಸಂಖ್ಯೆ ಇವುಗಳಲ್ಲಿ ಯಾವುದು?ಅ. 40 ಬ. 61 ಕ. 118 ಡ. 565 ಇ. 1266

10. ಹಗಲಿನಾಗಸದಲ್ಲಿ, ನಿರ್ದಿಷ್ಟ ಹವಾ ಸಂದರ್ಭಗಳಲ್ಲಿ ಗೋಚರಿಸುವ ವರ್ಣಮಯ ವಿದ್ಯಮಾನದ ದೃಶ್ಯ ಚಿತ್ರ-10ರಲ್ಲಿದೆ. ಯಾವುದು ಆ ವಿದ್ಯಮಾನ?ಅ. ಮಳೆಬಿಲ್ಲು ಬ. ಕರೋನ ಕ. ಇರಿಡಿಸೆನ್ಸ್ ಡ. ಅಣಕು ಸೂರ್ಯ

11. ನಮ್ಮ ಗ್ಯಾಲಕ್ಸಿಯಾದ ‘ಕ್ಷೀರ ಪಥ’ಕ್ಕೆ ಹಲವಾರು ‘ಉಪಗ್ರಹ ಗ್ಯಾಲಕ್ಸಿ’ಗಳಿವೆ; ಅವುಗಳಲ್ಲೊಂದು ಚಿತ್ರ-11ರಲ್ಲಿದೆ. ಅತ್ಯಂತ ಪರಿಚಿತವಾದ ಈ ಉಪಗ್ರಹ ಗ್ಯಾಲಕ್ಸಿ ಯಾವುದು, ಗುರುತಿಸಬಲ್ಲಿರಾ?

ಅ. ಸ್ಯಾಜಿಟೇರಿಯಸ್ ಕುಬ್ಜ ಗ್ಯಾಲಕ್ಸಿ ಬ. ಆಂಡ್ರೋಮೇಡಾ ಗ್ಯಾಲಕ್ಸಿ ಕ. ಚಿಕ್ಕ ಮ್ಯಾಜಲಾನಿಕ್ ಮೋಡ ಡ. ಬೃಹತ್ ಮ್ಯಾಜಲಾನಿಕ್ ಮೋಡ

12. ಅತ್ಯಂತ ಪರಿಚಿತ ಸಸ್ಯವೊಂದರ ‘ಸಸಿ’ ಚಿತ್ರ-12ರಲ್ಲಿದೆ. ಇದು ಯಾವ ಸಸ್ಯದ ಸಸಿ ಗೊತ್ತೇ?

ಅ. ಅಡಿಕೆ ಬ. ಖರ್ಜೂರ ಕ. ಈಚಲ ಡ. ತಾಳೆ ಇ. ತೆಂಗು

13. ಜೀವಿಗಳಿಗೆ ಸಂಬಂಧಿಸಿದ ಅತಿ ವಿಶಿಷ್ಟ, ಶಾಶ್ವತ ನೈಸರ್ಗಿಕ ಚಿತ್ತಾರದ ದೃಶ್ಯವೊಂದು ಚಿತ್ರ-13ರಲ್ಲಿದೆ. ಇದೇನೆಂಬುದನ್ನು ಕೆಳಗಿನ ಪಟ್ಟಿಯಲ್ಲಿ ಗುರುತಿಸುವುದು ಸಾಧ್ಯವೇ?

ಅ. ವೃಕ್ಷದುಂಗುರ →ಬ. ಮನುಷ್ಯರ ಬೆರಳಚ್ಚು ಕ. ಚಿಟ್ಟೆಯ ರೆಕ್ಕೆ →ಡ. ಜೀಬ್ರಾದ ಚರ್ಮ

14. ‘ಕ್ವಾರ್ಟ್ಜ್’ ಖನಿಜದ ಸುಂದರ ಹರಳೊಂದು ಚಿತ್ರ-14ರಲ್ಲಿದೆ. ಸಿಲಿಕಾನ್ ಮತ್ತು ಆಮ್ಲಜನಕ - ಇವುಗಳಿಂದ ಸಂಯೋಜಿತವಾದ ಸಿಲಿಕಾನ್ ಡೈಆಕ್ಸೈಡ್ ಅಥವಾ ಕ್ವಾರ್ಟ್ಜ್ ಅತ್ಯಂತ ಸಮೃದ್ಧವಾಗಿ ಬೆರೆತಿರುವ ವಸ್ತು ಇವುಗಳಲ್ಲಿ ಯಾವುದು?

ಅ. ಜೇಡಿ ಮಣ್ಣು ಬ. ಮರಳು ಕ. ಬಸಾಲ್ಟ್ ಶಿಲೆ →ಡ. ಅಮೃತ ಶಿಲೆ

ಉತ್ತರಗಳು:

1. ಅ - ಡೋಡೋ; ಬ - ಮಾರಿಷಸ್ ದ್ವೀಪ

2. ಬ - ಸೆಫಲೋಪೋಡಾ

3. ಡ - ಮೆಸಪೊಟೊಮಿಯಾ

4. ಕ - ಕುಬ್ಜ ಗ್ರಹ

5. ಅ - ಕೋರಂಡಂ; ಬ - ಕ್ರೋಮಿಯಂ

6. ಡ ಮತ್ತು ಈ

7. ಬ - ಹನ್ನೆರಡು

8. ಅ - ದಕ್ಷಿಣ ಅಮೆರಿಕ ಮತ್ತು ಮಧ್ಯ ಅಮೆರಿಕದ ವೃಷ್ಟಿವನ

9. ಬ - 61

10. ಕ - ಇರಿಡಿಸೆನ್ಸ್

11. ಡ - ಬೃಹತ್ ಮ್ಯಾಜಲಾನಿಕ್ ಮೋಡ

12. ಇ - ತೆಂಗು

13. ಅ - ವೃಕ್ಷದುಂಗುರ

14. ಬ - ಮರಳು

ಪ್ರತಿಕ್ರಿಯಿಸಿ (+)