ಮಂಗಳವಾರ, ಡಿಸೆಂಬರ್ 10, 2019
25 °C

ಇಲಿಗಳ ಮದುವೆ

Published:
Updated:
ಇಲಿಗಳ ಮದುವೆ

ಡಾ.ಕೆ.ಬಿ. ರಂಗಸ್ವಾಮಿ

ಬಿಲಗಳ ದ್ವಾರಕೆ
ತೋರಣ ಚಪ್ಪರ
ಒಳಗಡೆ ಇಲಿಗಳ
ಸಂಭ್ರಮ ಸಡಗರ

ವಧುವಿನ ಕಡೆಯ
ಇಲಿಗಳ ದಂಡು
ಹರುಷದಿ ಕುಣಿಯಿತು
ದಿಬ್ಬಣ ಕಂಡು

ಗಾಂಭೀರ್ಯದಿoದ
ಚೆಂದದ ವರ ಇಲಿ
ಕುಳಿತಿತು ಬಿಮ್ಮಗೆ
ಮಂಟಪದಲ್ಲಿ

ನಾಚುತ ಬಳುಕುತ
ಬಂದಿತು ವಧು ಇಲಿ
ತವರನು ತೊರೆಯುವ
ದುಗುಡವು ಮನದಲಿ

ಡುಂ ಡುಂ ಡುಂ ಡುಂ
ಮೇಳದ ಸದ್ದಿಗೆ
ತಾಳಿಯು ಬಿದ್ದಿತು
ವಧುವಿನ ಕತ್ತಿಗೆ
ಅಕ್ಷತೆ ಎರಚಿ

ಹರಸಿತು ಇಲಿಗಣ
ಕೊಬ್ಬರಿ ಮಿಠಾಯಿ
ಭೂರಿ ಭೋಜನ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು