ಶುಕ್ರವಾರ, ಡಿಸೆಂಬರ್ 6, 2019
26 °C

ಅಂಗೈಲಿ ಆರೋಗ್ಯ

Published:
Updated:
ಅಂಗೈಲಿ ಆರೋಗ್ಯ

ಬಿಳುಪು ಬಣ್ಣದ ಮೂಲಂಗಿಯ
ತಿನ್ನಲು ತಡೆವುದು ಮೂಲವ್ಯಾಧಿಯ
ಕೇಸರಿ ಬಣ್ಣದ ಕಿತ್ತಳೆ ಹಣ್ಣು
ತಿಂದರೆ ಕಳೆವುದು ಬಾಯಿ ಹುಣ್ಣು

ಕೆಂಪನೆ ಮಿನುಗುವ ಕಲ್ಲಂಗಡಿಯ
ತಿನ್ನಲು ತಡೆವುದು ಬಾಯಾರಿಕೆಯ
ತಿಳಿ ಹಸಿರಿನ ಹಸಿಯಾದ ಸೌತೆ
ಪಚನಕ್ರಿಯೆಗೆ ಸಹಕಾರಿಯಂತೆ

ಕೆಂಬಣ್ಣದ ಸಿಹಿ ಕಾಶ್ಮೀರ ಸೇಬು
ತಿನ್ನಲು ತುಂಬದು ವೈದ್ಯರ ಜೇಬು
ಹಲವು ವರ್ಣಗಳ ತರಕಾರಿಗಳ
ದಿನವೂ ತಿನ್ನಲು ಶಕ್ತಿಯು ಬಹಳ
ಬಗೆ ಬಗೆ ಬಣ್ಣದ ಧಾನ್ಯಗಳ
ಪ್ರತಿ ದಿನ ಸೇವಿಸೆ ಕಾಯಿಲೆ ವಿರಳ

ನಮ್ಮ ನಡುವಿನ ಸಸ್ಯೋತ್ಪನ್ನಗಳು
ಪೋಷಕಾಂಶಗಳ ಭಂಡಾರಗಳು
ಕರಿದು ಬೇಯಿಸುವ ಕುರುಕಲು ತಿಂಡಿ
ತಿಂದರೆ ಹತ್ತಬೇಕು ರೋಗಗಳ ಬಂಡಿ

 

ಪ್ರತಿಕ್ರಿಯಿಸಿ (+)