ಭಾನುವಾರ, ಡಿಸೆಂಬರ್ 15, 2019
23 °C

ಟೇಬಲ್‌ ಟೆನಿಸ್‌: ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ತೋರಿದ ಮಣಿಕ್‌ ಬಾತ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ಟೇಬಲ್‌ ಟೆನಿಸ್‌: ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ತೋರಿದ ಮಣಿಕ್‌ ಬಾತ್ರಾ

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಒಂದಾದ ಮೇಲೊಂದು ಸಾಧನೆ ತೊರುತ್ತಿರುವ ಭಾರತೀಯ ಕ್ರೀಡಾಪಟುಗಳ ಚಿನ್ನ, ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಟೇಬಲ್‌ ಟೆನಿಸ್‌ ಸಿಂಗಲ್ಸ್‌ ವಿಭಾಗದಲ್ಲಿ ಶನಿವಾರ ಭಾರತೀಯ ಕ್ರೀಡಾಪಟು ಮಣಿಕ್‌ ಬಾತ್ರಾ ಅವರು ಚಿನ್ನಕ್ಕೆ ಮುತ್ತಿಕ್ಕಿದರು. ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಮಹಿಳಾ ಕ್ರೀಡಾಪಟುವಾಗಿ ಹೊರ ಹೊಮ್ಮಿ, ಚಾರಿತ್ರಿಕ ಸಾಧನೆ ತೋರಿದರು.

ಮಣಿಕ್‌ ಬಾತ್ರಾ ಫೈನಲ್‌ ಪಂದ್ಯದಲ್ಲಿ ಸಿಂಗಾಪುರದ ಯು ಮೆಂಗ್ಯು ಅವರನ್ನು 4-0 ಅಂತರದಿಂದ ಸೋಲಿಸಿದ್ದರು.

ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮಣಿಕ್‌ ಬಾತ್ರಾ ವಿಶ್ವ 4ನೇ ಶ್ರೇಯಾಂಕಿತ ಆಟಗಾರ್ತಿ ಫೆಂಗ್‌ ಟಿಯಾನ್ವಿ ವಿರುದ್ಧ 4–3ರಲ್ಲಿ ನಿರ್ಣಾಯಕ ಗೆಲುವು ಪಡೆದಿದ್ದರು.

ಮೌಮಾ ದಾಸ್‌ಗೆ ಬೆಳ್ಳಿ

ಮತ್ತೊಂದು ಪಂದ್ಯದ ಮಹಿಳಾ ಡಬಲ್ಸ್‌ನಲ್ಲಿ 22 ವರ್ಷದ ಬಾರತೀಯ ಕ್ರೀಡಾಪಟು ಮೌಮಾ ದಾಸ್‌ ಬೆಳ್ಳಿ ಗೆದ್ದಿದ್ದಾರೆ. ಈ ಮೂಲಕ ಚಿನ್ನದ ಪದಕಗಳ ಗಳಿಕೆಯೊಂದಿಗಿನ ಭಾರತದ ಪದಕಗಳ ಪಟ್ಟಿಗೆ ತಮ್ಮ ಬೆಳ್ಳಿ ಪದಕವನ್ನು ಸೇರ್ಪಡೆಗೊಳಿಸಿದರು.

ನಾಲ್ಕನೇ ಪದಕ ಗೆದ್ದಿರುವ ಮೌಮಾ ನಾಳೆ ನಡೆಯುವ ಮಿಕ್ಸಡ್ ಡಬಲ್ಸ್‌ ಪಂದ್ಯದಲ್ಲಿ ಕಂಚಿಗಾಗಿ ಸೆಣಸಾಡಲಿದ್ದಾರೆ.

ಮಣಿಕ್‌ ಬಾತ್ರಾ ಆಟವ ವೈಖರಿ.

ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ತೋರಿದ ಮಣಿಕ್‌ ಬಾತ್ರಾ ಸಂಭ್ರಮ - ಚಿತ್ರಗಳು: ಎಎಫ್‌ಪಿ, ರಾಯಿಟರ್ಸ್‌

ಪ್ರತಿಕ್ರಿಯಿಸಿ (+)