ಶುಕ್ರವಾರ, ಡಿಸೆಂಬರ್ 6, 2019
24 °C

‘ಪ್ರಧಾನಿಯಾಗಿರುವುದು ಸುಲಭದ ಮಾತಲ್ಲ!’: ಮೋದಿ ವಿರುದ್ಧ ರಮ್ಯಾ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಧಾನಿಯಾಗಿರುವುದು ಸುಲಭದ ಮಾತಲ್ಲ!’: ಮೋದಿ ವಿರುದ್ಧ ರಮ್ಯಾ ವ್ಯಂಗ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಮೋದಿ ಅವರು ಕೈ ಮುಂದೆ ಮಾಡಿರುವ ಚಿತ್ರ ಪ್ರಕಟಿಸಿರುವ ರಮ್ಯಾ, ಅದರ ಮೇಲ್ಭಾಗದಲ್ಲಿ ‘ಪ್ರಧಾನಿಯಾಗಿರುವುದು ನನಗೆ ಸುಲಭದ ಮಾತಲ್ಲ!’ ಎಂಬ ಬರಹ ಪ್ರಕಟಿಸಿದ್ದಾರೆ. ಚಿತ್ರದ ಕೆಳಭಾಗದಲ್ಲಿ ‘2019ರಲ್ಲಿ ಈ ಚಿಹ್ನೆಗೆ ಮತ ನೀಡಿ’ ಎಂದು ‘ಕೈ’ಯನ್ನು ಉದ್ದೇಶಿಸಿ ಬರೆಯಲಾಗಿದೆ.

ಈ ಟ್ವೀಟ್‌ಗೆ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಅವರು (ಮೋದಿ) ಒಬ್ಬ ತಾರಾ ಪ್ರಚಾರಕ’ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಬ್ಬರು ‘ಕಾಂಗ್ರೆಸ್‌ ದ್ವೇಷದ ಮತ್ತು ನಕಾರಾತ್ಮಕ ರಾಜಕಾರಣ ಮಾಡುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಲವು ತಮಾಷೆಯ, ವ್ಯಂಗ್ಯದ ಪ್ರತಿಕ್ರಿಯೆಗಳು ಈ ಟ್ವೀಟ್‌ಗೆ ವ್ಯಕ್ತವಾಗಿದೆ.

ಪ್ರತಿಕ್ರಿಯಿಸಿ (+)