ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ವಹಿವಾಟು ಅಲ್ಪ ಇಳಿಕೆ

ಕಾರ್ಮಿಕರನ್ನು ಅವಲಂಬಿಸಿದ ವಲಯಗಳಿಗೆ ನಗದು ಕೊರತೆ ಸಮಸ್ಯೆ
Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಫ್ತು ವಹಿವಾಟು ನಾಲ್ಕು ತಿಂಗಳ ಬಳಿಕ ಮಾರ್ಚ್‌ನಲ್ಲಿ ನಕಾರಾತ್ಮಕ ಮಟ್ಟಕ್ಕೆ ಇಳಿಕೆ ಕಂಡಿದೆ.

ಪೆಟ್ರೋಲಿಯಂ, ವಜ್ರ ಮತ್ತು ಚಿನ್ನಾಭರಣ ರಫ್ತು ಪ್ರಮಾಣ ತಗ್ಗಿರುವುದರಿಂದ ಮಾರ್ಚ್‌ನಲ್ಲಿ ಶೇ 0.66 ರಷ್ಟು ಕಡಿಮೆಯಾಗಿದೆ. ಈ ಹಿಂದೆ 2017ರ ಅಕ್ಟೋಬರ್‌ನಲ್ಲಿ ವಹಿವಾಟು ಶೇ 1.12 ರಷ್ಟು ಇಳಿಕೆಯಾಗಿತ್ತು‌ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಆಮದು ವಹಿವಾಟು ಶೇ 7.15 ರಷ್ಟು ಏರಿಕೆ ಕಂಡಿದ್ದು ₹ 2.78 ಲಕ್ಷ ಕೋಟಿ ಮೌಲ್ಯದ ಸರಕುಗಳು ಆಮದಾಗಿವೆ. ಇದರಿಂದ ವ್ಯಾಪಾರ ಕೊರತೆ ಅಂತರವು ₹ 88,985 ಕೋಟಿಗೆ ತಲುಪಿದೆ.

ಕಾರ್ಮಿಕರನ್ನು ಅವಲಂಬಿಸಿರುವ ವಲಯಗಳಾದ ವಜ್ರ ಮತ್ತು ಚಿನ್ನಾಭರಣ, ಜವಳಿ ಮತ್ತು ಕೃಷಿ ಉತ್ಪನ್ನಗಳ ರಫ್ತು ವಹಿವಾಟಿನ ಬಗ್ಗೆ ಆತಂಕ ಹೊಂದಿರುವುದಾಗಿ ಭಾರತೀಯ ರಫ್ತುದಾರರ ಸಂಘಟನೆ (ಎಫ್‌ಐಇಒ) ಹೇಳಿದೆ.

ಬ್ಯಾಂಕ್‌ಗಳು ಮತ್ತು ಸಾಲದಾತ ಸಂಸ್ಥೆಗಳು ತಮ್ಮ ನಿಯಮಗಳನ್ನು ಬಿಗಿಗೊಳಿಸುತ್ತಿವೆ. ಹೀಗಾಗಿ ಕಾರ್ಮಿಕರನ್ನು ಅವಲಂಬಿಸಿರುವ ವಲಯಗಳಿಗೆ ನಗದು ಅಭಾವ ಎದುರಾಗುತ್ತಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ತಯಾರಿಕೆ ಆಗದೆ ರಫ್ತು ಸಾಧ್ಯವಾಗುತ್ತಿಲ್ಲ ಎಂದು ಸಂಘಟನೆ ತಿಳಿಸಿದೆ.

ಉತ್ತಮ ಪ್ರಗತಿ: ರಫ್ತು ವಹಿವಾಟು ಎರಡು ಹಣಕಾಸು ವರ್ಷಗಳ ಬಳಿಕ 2017–18ರಲ್ಲಿ ರಫ್ತು ವಹಿವಾಟು  ₹ 19.50 ಲಕ್ಷ ಕೋಟಿಯ ಗಡಿ ದಾಟಿದೆ. 2014–15ರಲ್ಲಿ ₹ 20.15 ಲಕ್ಷ ಕೋಟಿ ಇತ್ತು.

ಆಮದು ವಹಿವಾಟು ಶೇ 10.59 ರಷ್ಟು ಏರಿಕೆ ದಾಖಲಿಸಿದ್ದು, ₹ 29.83 ಲಕ್ಷ ಕೋಟಿಗೆ ತಲುಪಿದೆ.

ಚಿನ್ನ ಆಮದು ಇಳಿಕೆ: ಮಾರ್ಚ್ ತಿಂಗಳಿನಲ್ಲಿ ಚಿನ್ನದ ಆಮದು ಶೇ 40 ರಷ್ಟು ಇಳಿಕೆ ಕಂಡಿದ್ದು, ₹ 16,185 ಕೋಟಿ ಮೌಲ್ಯದ ಚಿನ್ನ ಆಮದಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 27,105 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು.

ಚಿನ್ನ ಆಮದು ಇಳಿಕೆ
ಮಾರ್ಚ್ ತಿಂಗಳಿನಲ್ಲಿ ಚಿನ್ನದ ಆಮದು ಶೇ 40 ರಷ್ಟು ಇಳಿಕೆ ಕಂಡಿದ್ದು, ₹ 16,185 ಕೋಟಿ ಮೌಲ್ಯದ ಚಿನ್ನ ಆಮದಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 27,105 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಹೀಗಾಗಿ ಚಿನ್ನದ ಆಮದು ಮೌಲ್ಯ ಕಡಿಮೆ ಆಗಿದೆ ಎಂದು ಉದ್ಯಮವಲಯದ ತಜ್ಞರು ಹೇಳಿದ್ದಾರೆ.

ಸೇವಾ ರಫ್ತು ಇಳಿಕೆ
ಸೇವಾ ವಲಯದ ರಫ್ತು ವಹಿವಾಟು ಫೆಬ್ರುವರಿ ತಿಂಗಳಿನಲ್ಲಿ ಶೇ 3.84 ರಷ್ಟು ಇಳಿಕೆ ಕಂಡಿದ್ದು ₹ 1.02 ಲಕ್ಷ ಕೋಟಿಗೆ ತಲುಪಿದೆ. ಆಮದು ಶೇ 3.1 ರಷ್ಟು ಹೆಚ್ಚಾಗಿದ್ದು ₹ 65,910 ಕೋಟಿ ಯಷ್ಟಾಗಿದೆ. ಜಿಡಿಪಿಯಲ್ಲಿ ಸೇವಾ ವಲಯದ ಕೊಡುಗೆ ಶೇ 55 ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT