ಗುರುವಾರ , ಜೂನ್ 4, 2020
27 °C

ಏರ್‌ ಇಂಡಿಯಾ ವರಮಾನ ವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

ಏರ್‌ ಇಂಡಿಯಾ ವರಮಾನ ವೃದ್ಧಿ

ನವದೆಹಲಿ: ‘2017–18ನೇ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ವರಮಾನ ಶೇ 11 ರಷ್ಟು ವೃದ್ಧಿಯಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇ 80ರಷ್ಟಿದೆ. ‘ಸಂಸ್ಥೆಯ ಹಣಕಾಸು ಸ್ಥಿತಿ ಮತ್ತು ಪ್ರದರ್ಶನ ಉತ್ತಮವಾಗಿದ್ದರಿಂದ ಈ ಪ್ರಗತಿ ಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.

ನಷ್ಟದಲ್ಲಿರುವ ಸಂಸ್ಥೆಯ ಷೇರು ವಿಕ್ರಯಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಶೇ 76 ರಷ್ಟು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಷೇರು ಖರೀದಿಸುವವರು ಮೂರು ವರ್ಷಗಳ ಅವಧಿಯ ವರೆಗೆ ಏರ್‌ ಇಂಡಿಯಾದಲ್ಲಿ ಹೂಡಿಕೆ ಮಾಡಬೇಕು.

2015–16ರಲ್ಲಿ ಸಂಸ್ಥೆಯ ಕಾರ್ಯಾಚರಣೆ ಲಾಭ ₹ 105 ಕೋಟಿ ಇತ್ತು. ಇದು 2016–17ರಲ್ಲಿ ₹ 298 ಕೋಟಿಗೆ ಏರಿಕೆ ಕಂಡಿತ್ತು. ನಷ್ಟ ₹ 3,837 ಕೋಟಿಯಿಂದ ₹ 5,765 ಕೋಟಿಗೆ ತಲುಪಿದೆ. ಸಂಸ್ಥೆಯ ವರಮಾನ ₹ 20,610 ಕೋಟಿಗಳಿಂದ ₹ 22,178 ಕೋಟಿಗಳಿಗೆ ಏರಿಕೆಯಾಗಿದೆ.

ನಷ್ಟದಲ್ಲಿರುವ ಸಂಸ್ಥೆಯನ್ನು ಖರೀದಿಸುವ ನಿರ್ಧಾರದಿಂದ ಜೆಟ್‌ ಏರ್‌ವೇಸ್‌ ಮತ್ತು ಇಂಡಿಗೊ ಸಂಸ್ಥೆಗಳು ಹಿಂದೆ ಸರಿದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.