ಫೈನಲ್‌ನಲ್ಲಿ ಯೂಕಿ ಭಾಂಬ್ರಿ, ರಾಮಕುಮಾರ್‌ ಮುಖಾಮುಖಿ

7

ಫೈನಲ್‌ನಲ್ಲಿ ಯೂಕಿ ಭಾಂಬ್ರಿ, ರಾಮಕುಮಾರ್‌ ಮುಖಾಮುಖಿ

Published:
Updated:
ಫೈನಲ್‌ನಲ್ಲಿ ಯೂಕಿ ಭಾಂಬ್ರಿ, ರಾಮಕುಮಾರ್‌ ಮುಖಾಮುಖಿ

ತೈಪೆ: ಆಕರ್ಷಕ ಆಟವಾಡಿದ ಭಾರತದ ಯೂಕಿ ಭಾಂಬ್ರಿ ಹಾಗೂ ರಾಮಕುಮಾರ್‌ ರಾಮನಾಥನ್‌ ಅವರು ಇಲ್ಲಿ ನಡೆಯುತ್ತಿರುವ ತೈಪೆ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಜಪಾನ್‌ನ ತತ್ಸುಮಾ ಇಟೊ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಯೂಕಿ ಅವರು 3–6, 6–3, 6–4ರ ಸೆಟ್‌ಗಳಿಂದ ಜಯ ಸಾಧಿಸಿದರು. ಜಪಾನಿನ ಏಳನೇ ಕ್ರಮಾಂಕದ ಆಟಗಾರ ಗೊ ಸೂಡಾರನ್ನು ರಾಮಕುಮಾರ್‌ ಅವರು 7–6, 6–4ರ ನೇರ ಸೆಟ್‌ಗಳಿಂದ ಮಣಿಸಿದರು.

ರೋಚಕ ಹಣಾಹಣಿಯಿಂದ ಕೂಡಿದ್ದ ಎರಡು ಪಂದ್ಯಗಳಲ್ಲಿ ಎದುರಾಳಿಗಳನ್ನು ಸೋಲಿಸಲು ಭಾರತದ ಆಟಗಾರರು ಹರಸಾಹಸಪಟ್ಟರು. 

ಪುಣೆ ಚಾಲೆಂಜರ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಯೂಕಿ ಹಾಗೂ ರಾಮಕುಮಾರ್‌ ಅವರು ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಯೂಕಿ ಅವರು ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು.

ಸಾಕೇತ್‌–ಪ್ರಜ್ಞೇಶ್‌ ಜೋಡಿಗೆ ಜಯ: ಇದೇ ಟೂರ್ನಿಯ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಸಾಕೇತ್‌ ಮೈನೇನಿ ಹಾಗೂ ಪ್ರಜ್ಞೇಶ್‌ ಗುಣೇಶ್ವರನ್‌ ಜೋಡಿಯು ಗೆಲುವು ದಾಖಲಿಸಿ ಫೈನಲ್‌ ಪ್ರವೇಶಿಸಿದೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಜೋಡಿಯು ತೈವಾನ್‌ನ ಯು ಸಿಯು ಹ್ಸು ಹಾಗೂ ಜಿಮ್ಮಿ ವಾಂಗ್‌ ಅವರನ್ನು 2–6, 6–4, 14–12ರ ಸೆಟ್‌ಗಳಿಂದ ಸೋಲಿಸಿತು.

‘ಫೈನಲ್‌ ಪ್ರವೇಶಿಸಿದ್ದು ಸಂತಸದ ಸಂಗತಿ. ಪ್ರಜ್ಞೇಶ್‌ರೊಂದಿಗೆ ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಸಾಕೇತ್‌ ಸಂತಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry