ಚೇತರಿಕೆಗೆ ಇನ್ನೊಂದು ತಿಂಗಳು ಬೇಕು: ನೇಮರ್‌

ಶುಕ್ರವಾರ, ಮಾರ್ಚ್ 22, 2019
26 °C

ಚೇತರಿಕೆಗೆ ಇನ್ನೊಂದು ತಿಂಗಳು ಬೇಕು: ನೇಮರ್‌

Published:
Updated:
ಚೇತರಿಕೆಗೆ ಇನ್ನೊಂದು ತಿಂಗಳು ಬೇಕು: ನೇಮರ್‌

ರಿಯೊ ಡಿ ಜನೈರೊ: ‘ನನಗಾಗಿರುವ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಇನ್ನೂ ಒಂದು ತಿಂಗಳು ಸಮಯ ಬೇಕು’ ಎಂದು ಬ್ರೆಜಿಲ್‌ನ ಫುಟ್‌ಬಾಲ್‌ ಆಟಗಾರ ನೇಮರ್‌ ಹೇಳಿದ್ದಾರೆ.

ಇಲ್ಲಿನ ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು ‘ಗಾಯ ವಾಸಿಯಾಗುತ್ತಿದೆ. ನಿಗದಿತ ಸಮಯದಲ್ಲಿ ಚೇತರಿಸಿಕೊಂಡರೆ ಇನ್ನೊಂದು ತಿಂಗಳಲ್ಲಿ ಅಭ್ಯಾಸ ಆರಂಭಿಸಲಿದ್ದೇನೆ’ ಎಂದು ಹೇಳಿದ್ದಾರೆ.

ನೇಮರ್‌ ಗುಣಮುಖರಾದರೆ, ರಷ್ಯಾದಲ್ಲಿ ಜೂನ್‌ನಲ್ಲಿ ಆರಂಭವಾಗುವ ಫಿಫಾ ವಿಶ್ವಕಪ್‌ಗೆ ತೆರಳುವ ಬ್ರೆಜಿಲ್‌ ತಂಡದಲ್ಲಿ ಸ್ಥಾನ ಗಳಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry