ಶುಕ್ರವಾರ, ಡಿಸೆಂಬರ್ 13, 2019
19 °C

ಟಸ್ಕರ್‌ ಬಿಎಂಡಬ್ಲ್ಯು ಮೋಟೊರಾಡ್‌ ವಾರ್ಷಿಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಸ್ಕರ್‌ ಬಿಎಂಡಬ್ಲ್ಯು ಮೋಟೊರಾಡ್‌ ವಾರ್ಷಿಕೋತ್ಸವ

ಬೆಂಗಳೂರು: ಲ್ಯಾವೆಲ್ಲೆ ರಸ್ತೆಯ ಟಸ್ಕರ್‌ ಬಿಎಂಡಬ್ಲ್ಯು ಮೋಟೊರಾಡ್‌ ಷೋರೂಮ್‌ ಪ್ರಥಮ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸಿಕೊಂಡಿದ್ದು, ತನ್ನ 100ನೇ ಬೈಕ್‌ ಅನ್ನು ಷಹಾನ್‌ ಖಾನ್‌ ಎಂಬುವರಿಗೆ ಮಾರಾಟ ಮಾಡಿತು.

ಬಿಎಂಡಬ್ಲ್ಯು ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಹ್ಯಾನ್ಸ್‌ ಕ್ರಿಸ್ಟಿಯನ್‌ ಬಾರ್ಟಿಯಲ್ಸ್‌ ಹಾಗೂ ಮುಖ್ಯಸ್ಥ ಶಿವಪಾದ ರೇ ಅವರು ‘ಬಿಎಂಡಬ್ಲ್ಯು ಆರ್‌ 1200 ಜಿಎಸ್‌ಎ’ ಮಾದರಿಯ ಬೈಕ್‌ನ ಕೀ ಅನ್ನು ಷಹಾನ್‌ ಅವರಿಗೆ ಹಸ್ತಾಂತರಿಸಿದರು.

‘ದೇಶದಲ್ಲಿ ಒಟ್ಟು ಏಳು ಡೀಲರ್‌ಶಿಪ್‌ಗಳಿವೆ. 15 ಮಾದರಿಯ ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ನಮ್ಮ ಉತ್ಪನ್ನಗಳು ಎಂದಿಗೂ ಹೊಸತನ, ಸುರಕ್ಷತೆ ಹಾಗೂ ವಿನ್ಯಾಸಕ್ಕೆ ಹೆಸರುವಾಸಿ. ಇದಕ್ಕೆ ಒಂದಿಷ್ಟೂ ಚ್ಯುತಿ ಬರದಂತೆ ನಮ್ಮ ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸಿದ್ದೇವೆ. ಹೀಗಾಗಿ, ಸಂಸ್ಥೆಗೆ 9 ಪ್ರಶಸ್ತಿಗಳು ಸಂದಿವೆ’ ಎಂದು ಶಿವಪಾದ ರೇ ಸಂತಸ ವ್ಯಕ್ತಪಡಿಸಿದರು.

ಷೋರೂಮ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ರೆಡ್ಡಿ, ‘2017ರ ಏಪ್ರಿಲ್‌ 14ರಂದು ಡೀಲರ್‌ಶಿಪ್‌ ಆರಂಭಿಸಲಾಯಿತು. ಮೊದಲ ವಾರ್ಷಿಕೋತ್ಸವವನ್ನು ಗ್ರಾಹಕರು ಹಾಗೂ ಕಂಪನಿಯ ಮುಖ್ಯಸ್ಥರೊಂದಿಗೆ ಆಚರಿಸಿಕೊಳ್ಳಲಾಗುತ್ತಿದೆ. ಇಲ್ಲಿ 1200 ಜಿಎಸ್‌ ಮಾದರಿಯ 68 ಬೈಕ್‌ಗಳು ಮಾರಾಟವಾಗಿವೆ’ ಎಂದರು.

ಅತ್ಯುತ್ತಮ ಡೀಲರ್‌ಶಿಪ್‌ ವಾರ್ಷಿಕ ಪ್ರಶಸ್ತಿಯನ್ನು ಟಸ್ಕರ್‌ ಬಿಎಂಡಬ್ಲ್ಯು ಮೋಟೊರಾಡ್‌ಗೆ ನೀಡಲಾಯಿತು.

‘ಬೈಕ್‌ ಸಾಹಸ ನನ್ನ ಹವ್ಯಾಸ. ಬಿಎಂಡಬ್ಲ್ಯು ಅದ್ಭುತ ಬೈಕ್‌. ಅದರಲ್ಲಿ ಸವಾರಿ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಷಹಾನ್‌ ಖಾನ್‌ ಹೇಳಿದರು.

ಪ್ರತಿಕ್ರಿಯಿಸಿ (+)