ಗುರುವಾರ , ಡಿಸೆಂಬರ್ 12, 2019
20 °C
ಕರ್ನಾಟಕ ಜಾಗೃತಿ ಸಮಿತಿ ಸದಸ್ಯರ ಆಗ್ರಹ

ನಾಡು ನುಡಿ: ಬದ್ಧತೆ ತೋರುವವರಿಗೆ ಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡು ನುಡಿ: ಬದ್ಧತೆ ತೋರುವವರಿಗೆ ಮತ

ಬೆಂಗಳೂರು: ಕನ್ನಡಕ್ಕೆ ಸಂಬಂಧಿಸಿದ 16 ಹಕ್ಕೊತ್ತಾಯಗಳನ್ನು ಕನ್ನಡ–ಕನ್ನಡಿಗ–ಕರ್ನಾಟಕ ಜಾಗೃತಿ ಸಮಿತಿ ಸದಸ್ಯರು ಮಂಡಿಸಿದ್ದು, ‘ಕನ್ನಡ ನಾಡು ನುಡಿಯ ಬಗೆಗೆ ಬದ್ಧತೆ ತೋರುವವರಿಗೇ ಮತದಾನ ಮಾಡಿ’ ಎಂದು ಆಗ್ರಹಿಸಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಪ್ರಾರಂಭವಾಗಿದ್ದ ಎಸ್‌ಬಿಎಂ ಅನ್ನು ಎಸ್‌ಬಿಐ ಜೊತೆ ವಿಲೀನಗೊಳಿಸಲಾಗಿದೆ. ಇದು ಕನ್ನಡಿಗರು ಅಸ್ಮಿತೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದರ ಸ್ಪಷ್ಟ ನಿದರ್ಶನ’ ಎಂದು ಬೇಸರ ವ್ಯಕ್ತ ಪಡಿಸಿದರು.

ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ರಾಷ್ಟ್ರೀಯ ನೀತಿ ಆಗಬೇಕು. ಸರೋಜಿನಿ ಮಹಿಷಿ ವರದಿ ಕಾನೂನು ಆಗಿ ಜಾರಿ ಆಗಬೇಕು, ರಾಜ್ಯದಲ್ಲಿ ಸೃಷ್ಟಿಯಾಗುವ ಎಲ್ಲ ಕೆಲಸಗಳಲ್ಲಿ ಕನ್ನಡಿಗರಿಗೇ ಆದ್ಯತೆ ನೀಡಬೇಕು. ಕನ್ನಡಿಗರನ್ನು ಉದ್ಯಮಶೀಲರನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರೇ ಹೆಚ್ಚಾಗಿ ಆಯ್ಕೆಯಾಗಲು ಬೇಕಾದ ತರಬೇತಿ ಶಿಬಿರಗಳನ್ನು ಸರ್ಕಾರ ತೆರೆಯಬೇಕು. ಸ್ಥಳೀಯ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಬೇಕು. ರಾಜ್ಯ/ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)