ಮಂಗಳವಾರ, ಜೂಲೈ 7, 2020
27 °C

ಕೆಕೆಆರ್‌ ವಿರುದ್ಧ ಸನ್‌ರೈಸರ್ಸ್‌ಗೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಕೆಕೆಆರ್‌ ವಿರುದ್ಧ ಸನ್‌ರೈಸರ್ಸ್‌ಗೆ ಜಯ

ಕೋಲ್ಕತ್ತ: ಸನ್‌ರೈಸರ್ಸ್ ಹೈದರಾಬಾದ್ ತಂಡ ಶನಿವಾರದ ಎರಡನೇ ಪಂದ್ಯದಲ್ಲಿ ಐದು ವಿಕೆಟ್‌ ಗಳಿಂದ ಗೆದ್ದಿತು.

139 ರನ್‌ಗಳ ಜಯದ ಗುರಿ ಬೆನ್ನತ್ತಿದ ತಂಡ ಕೇನ್ ವಿಲಿಯಮ್ಸನ್‌ (50; 44ಎ, 1 ಸಿ, 4 ಬೌಂ) ಅವರ ಅರ್ಧಶತಕದ ಬಲದಿಂದ ಒಂದು ಓವರ್ ಬಾಕಿ ಇರುವಾಗಲೇ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್‌ ತಂಡಕ್ಕೆ ಸನ್‌ರೈಸರ್ಸ್‌ನ ಪ್ರಬಲ ಬೌಲಿಂಗ್ ದಾಳಿಗೆ ಉತ್ತರ ನೀಡಲು ಆಗಲಿಲ್ಲ.

ಕ್ರಿಸ್ ಲಿನ್‌ (49; 34 ಎ, 1 ಸಿ, 7 ಬೌಂ) ಮತ್ತು ನಾಯಕ ದಿನೇಶ್‌ ಕಾರ್ತಿಕ್ ಅವರನ್ನು ಬಿಟ್ಟರೆ ಇತರ ಯಾರಿಗೂ ಮಿಂಚಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಕೋಲ್ಕತ್ತ ನೈಟ್ ರೈಡರ್ಸ್‌: 20 ಓವರ್‌ಗಳಲ್ಲಿ 8ಕ್ಕೆ 138 (ಕ್ರಿಸ್ ಲಿನ್‌ 49, ಕಾರ್ತಿಕ್‌ 29; ಭುವನೇಶ್ವರ್‌ ಕುಮಾರ್‌ 26ಕ್ಕೆ3, ಸ್ಟಾನ್‌ಲೇಕ್ 21ಕ್ಕೆ2, ಶಕೀಬ್‌ ಅಲ್ ಹಸನ್‌ 21ಕ್ಕೆ2); ಸನ್‌ರೈಸರ್ಸ್ ಹೈದರಾಬಾದ್‌: 19 ಓವರ್‌ಗಳಲ್ಲಿ 5ಕ್ಕೆ 139 (ವಿಲಿಯಮ್ಸ್‌ 50, ಶಕೀಬ್‌ 27). ಫಲಿತಾಂಶ: ಸನ್‌ರೈಸರ್ಸ್‌ಗೆ 5 ವಿಕೆಟ್ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.