7
ನಿಂಗನೂರ: ಬಿಜೆಪಿ ಸಭೆಯಲ್ಲಿ ಸಂಗಮೇಶ ನಿರಾಣಿ ಅಭಿಮತ

ಗ್ರಾಮಗಳು ಸಂಸ್ಕೃತಿಯ ತೊಟ್ಟಿಲು

Published:
Updated:

ಜಮಖಂಡಿ: ‘ಗ್ರಾಮಗಳು ಸಂಸ್ಕೃತಿಯ ತೊಟ್ಟಿಲು ಆ ಸಂಸ್ಕೃತಿಗೆ ಧಕ್ಕೆಯಾಗದಂತೆ ಆಧುನಿಕ ಸಾಧನಗಳಿಂದ ಅಭಿವೃದ್ಧಿಗೊಳಿಸುವುದೇ ನಮ್ಮ ಧ್ಯೇಯ’ ಎಂದು ಬಿಜೆಪಿ ಮುಖಂಡ ಸಂಗಮೇಶ ನಿರಾಣಿ ಹೇಳಿದರು.ತಾಲ್ಲೂಕಿನ ನಿಂಗನೂರಿನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಇಲ್ಲಿಯವರೆಗೂ ಕ್ಷೇತ್ರದ ಅಭಿವೃದ್ದಿ ಕೇವಲ ಜಮಖಂಡಿ ನಗರಕ್ಕೆ ಮಾತ್ರ ಸೀಮಿತವಾಗಿದೆ. ಸುತ್ತಲಿನ ಹಳ್ಳಿಗಳು ಮೂಲ ಸೌಕರ್ಯದಿಂದ ವಂಚಿತವಾಗಿವೆ. ಹಳ್ಳಿಗಳು ನಗರದ ಜೀವನಾಡಿಗಳಾದರೂ ಹಳ್ಳಿಗಳನ್ನು ಮರೆತು ಕೇವಲ ನಗರದಲ್ಲಿ ಕಣ್ಣಿಗೆ ಕಾಣುವ ಕಟ್ಟಡಗಳನ್ನು ನಿರ್ಮಿಸಿ ಅದನ್ನೇ ಅಭಿವೃದ್ಧಿ ಎಂದು ಪ್ರಚಾರ ಪಡೆಯುತ್ತಿರುವುದು ಬಾಲಿಶತನ’ ಎಂದು ಕಿಡಿಕಾರಿದರು.

ಜನತೆ ಬೆಂಬಲಿಸಿದರೆ, ನಿಂಗನೂರ ಗ್ರಾಮ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶಗಳನ್ನು ಸುಸಜ್ಜಿತ ರಸ್ತೆ, ವ್ಯವಸ್ಥಿತ ಚರಂಡಿ, ಸಮರ್ಪಕ ಕುಡಿಯುವ ನೀರು ಸೇರಿದಂತೆ ಸಕಲ ಮೂಲ ಸೌಕರ್ಯ ಕಲ್ಪಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ಹಿರಿಯರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry