5

₹ 22 ಲಕ್ಷ ಮೌಲ್ಯದ ಮದ್ಯ ವಶ

Published:
Updated:

ಖಾನಾಪುರ: ತಾಲ್ಲೂಕಿನ ಬೆಳಗಾವಿ ಚೋರ್ಲಾ ರಾಜ್ಯ ಹೆದ್ದಾರಿಯ ಗೋವಾ ಗಡಿಯ ಸೂರಲ್ ಅಬಕಾರಿ ತನಿಖಾ ಠಾಣೆಯ ಮೂಲಕ ಶುಕ್ರವಾರ ಮಧ್ಯರಾತ್ರಿ ಗೋವಾದಿಂದ ಬೆಳಗಾವಿಯತ್ತ ಅನಧಿಕೃತವಾಗಿ ಸಾಗಿಸುತ್ತಿದ್ದ ₹ 22 ಲಕ್ಷ ಮೌಲ್ಯದ ಗೋವಾ ರಾಜ್ಯದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ವಯ ಸೂರಳ್ ಬಳಿ ಸ್ಥಾಪಿಸಿದ ಅಬಕಾರಿ ತನಿಖಾ ಠಾಣೆಯ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ತಪಾಸಣೆ ಸಂದರ್ಭದಲ್ಲಿ ಗೋವಾ ರಾಜ್ಯದ 34 ಬಾಕ್ಸ್ ಲಿಕ್ಕರ್, 3 ಬಾಕ್ಸ್ ಬೀಯರ್, 2 ಬಾಕ್ಸ್ ವೈನ್ ಮತ್ತು 15 ಲೀ ಗೋವಾ ಫೆನ್ನಿ ಸೇರಿ ಟ್ಟು 372 ಲೀಟರ್ ಗೋವಾ ಮದ್ಯ ಹಾಗೂ ಮದ್ಯ ಸಾಗಿಸುತ್ತಿದ್ದ ಮಹಾರಾಷ್ಟ್ರ ರಾಜ್ಯದ ನೊಂದಣಿಯ ಟಾಟಾ 407 ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಟಾಟಾ 407 ಚಾಲಕ ಬಾಬಾಸಾಹೇಬ ವಾಹೋಳೆ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಖಾನಾಪುರ ಅಬಕಾರಿ ಇನ್‌ಸ್ಪೆಕ್ಟರ್ ರವಿಶಂಕರ್ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry