ಮಂಗಳವಾರ, ಡಿಸೆಂಬರ್ 10, 2019
23 °C
ಬಾಬಾಸಾಹೇಬ ಪ್ರತಿಮೆಗೆ ಹಾರ ಹಾಕಿ ನಮನ; ಪ್ರೊ.ಮಹೇಶ್‌ ಚಂದ್ರಗುರು ಅಭಿಮತ

ಗಾಂಧಿ–ಅಂಬೇಡ್ಕರ್ ದೇಶದ ಕಣ್ಣುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿ–ಅಂಬೇಡ್ಕರ್ ದೇಶದ ಕಣ್ಣುಗಳು

ಬಳ್ಳಾರಿ: ‘ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಈ ದೇಶದ ಎರಡು ಕಣ್ಣುಗಳಂತೆ’ ಎಂದು ಪ್ರೊ.ಮಹೇಶ್‌ ಚಂದ್ರಗುರು ಹೇಳಿದರು.

ನಗರದ ವಿಜಯನಗರ ಶ್ರೀಕೃಷ್ಣದೇವ ರಾಯ ವಿಶ್ವವಿದ್ಯಾಲ ಯದಲ್ಲಿ ಶನಿವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 127ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದಮನಿತರ ಉದ್ಧಾರಕ್ಕಾಗಿ ಈ ಇಬ್ಬರೂ ಮಹಾನ್‌ ವ್ಯಕ್ತಿಗಳು ಜೀವನವನ್ನೇ ಮುಡಿಪಾಗಿಟ್ಟರು’ ಎಂದರು.

‘ಅಸ್ಪೃಶ್ಯತೆ ವಿರುದ್ಧ ಅಂಬೇಡ್ಕರ್‌ ನಿರಂತರ ಹೋರಾಡಿದ್ದರು. ಆದರೆ ಈಗ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ’ ಎಂದು ವಿಷಾದಿಸಿದರು.

ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌, ಕುಲಸಚಿವರಾದ ಪ್ರೊ.ಎಸ್‌.ಎ. ಪಾಟೀಲ, ಪ್ರೊ. ಹೊನ್ನು ಸಿದ್ಧಾರ್ಥ, ಪ್ರೊ.ಭೀಮನಗೌಡ, ಪ್ರೊ.ರಾಜೇಂದ್ರ ಪ್ರಸಾದ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಜಿಲ್ಲಾಡಳಿತ: ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪಾಲಿಕೆ , ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗಾಯಕ ಯಲ್ಲಪ್ಪ ಭಂಡಾರಿ ಕ್ರಾಂತಿಗೀತೆಗಳನ್ನು ಹಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಇಲಾಖೆಯ ಉಪನಿರ್ದೇಶಕ ಅಲ್ಲಾಭಕ್ಷ ಇದ್ದರು.

ವಿವಿಧಡೆ ಆಚರಣೆ: ರಾಜ್ಯ ದಲಿತ ಸಂಘರ್ಷ ಸಮಿತಿಯ(ಡಿಜಿ ಸಾಗರ ಬಣ) ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸಿದ್ದೇಶ್, ಲಿಂಗಪ್ಪ, ರಮೇಶ್, ಅಂಜಿನಿ, ರಂಗಪ್ಪ, ಮಲ್ಲಪ್ಪ,ಗಂಗಾಧರ್ ಇದ್ದರು.

ಜೆಡಿಎಸ್ ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ, ಮುಖಂಡರಾದ ಪಂಪಾಪತಿ, ಮೀನಳ್ಳಿ ತಾಯಣ್ಣ, ವೈ.ಗೋಪಾಲ್, ಶಾಂತಕುಮಾರ್, ಡಿ.ವಿಜಯಕುಮಾರ, ಕಿರಣ್ ಕುಮಾರ್, ಯಲ್ಲನಗೌಡ ಇದ್ದರು.

ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಕಪ್ಪಗಲ್ಲು ಓಂಕಾರಪ್ಪ, ಸಂಗನಕಲ್ಲು ಶಿವಕುಮಾರ, ಶ್ಯಾನವಾಸಪುರ ಸಿ. ಶರಣಬಸವ, ಮಲ್ಲಿಕಾರ್ಜುನ, ನಿಂಗಪ್ಪ, ಕೊಳಗಲ್ಲು ಹನುಮಂತಪ್ಪ, ವಿ. ಶಿವರಾಜ, ಬಿ.ನಾಗೇಂದ್ರ ಬೈಲೂರು, ಚಂದ್ರ, ಚಂದ್ರಪ್ಪ, ಉಮೇಶ್, ನರಸಪ್ಪ ಇದ್ದರು.

ರಾಜ್ಯ ಡಾ.ಬಾಬು ಜಗ ಜೀವನ್‌ರಾಮ್ ಯುವ ಜಾಗೃತಿ ವೇದಿಕೆ ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ರಾಜ್ಯ ಘಟಕ ಅಧ್ಯಕ್ಷ ಶ್ರೀನಿವಾಸ, ಮುಖಂಡರಾದ ವೈ.ಅರುಣಾಚಲಂ, ಜಾಳಿಹಾಳ ಸುಂಕಣ್ಣ, ಕೆ.ಪಕ್ಕೀರಯ್ಯ, ಹೆಚ್‌.ರಂಗಸ್ವಾಮಿ, ಹೆಚ್.ನಿಂಗಪ್ಪ, ಚಂದ್ರಶೇಖರ್ ಸಿಂದಿಗೇರಿ, ಗಾದಿಲಿಂಗ ಬೈಲೂರು ಇದ್ದರು.

ಬಹುಜನ ಸಮಾಜವಾದಿ ಪಾರ್ಟಿ ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಕುಮಾರ, ಮುಖಂಡರಾದ ಎಂ.ಉಮಾಪತಿ, ಸುಧೀರ್ ಕುಮಾರ, ವಿ.ಗೋವಿಂದಪ್ಪ, ಚಂದ್ರಣ್ಣ ಇದ್ದರು.

ಛಲವಾದಿ ಮಹಾಸಭಾದ ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಸಿ. ನರಸಪ್ಪ, ಮುಖಂಡರಾದ ಸಿ. ಶಿವಕುಮಾರ, ಜೆ.ಎಸ್.ಶ್ರೀನಿವಾಸಲು, ಡಿ.ಎಚ್. ಹನುಮೇಶಪ್ಪ, ಗೂಳೆಪ್ಪ ಬೆಳ್ಳಿಕಟ್ಟೆ, ಸಿ.ಶಂಕರ್, ಸಿ.ಶ್ರೀನಿವಾಸ, ತೊಲಮಾಮಿಡಿ ರಾಜು, ಮಾವಿನಹಳ್ಳಿ ಸದ್ದಬಸಪ್ಪ, ಸಂಗನಕಲ್ಲು ತಿಪ್ಪೇಸ್ವಾಮಿ ಇದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಜಿ.ಗೋವರ್ಧನ, ಎಸ್‌.ವಿಘ್ನೇಶ್, ಪಿ.ಜಗದೀಶ್ವರ ರೆಡ್ಡಿ, ಬಿ.ಕುಬೇರ, ಎಚ್‌.ವೀರಭದ್ರಪ್ಪ, ರಾಜು, ನಟರಾಜ ಇದ್ದರು.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗಣ್ಯರು ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಡಾ. ಬಿ. ಶ್ರೀನಿವಾಸ ಮೂರ್ತಿ, ಬ್ಯಾಂಕಿನ ಅಧ್ಯಕ್ಷ ಆರ್. ರವಿಕುಮಾರ್, ಬ್ಯಾಂಕಿನ ಮಹಾಪ್ರಬಂಧಕರಾದ ಗೋಪಾಲ ನಾಯ್ಕ್, ಡಿ. ಸುರೇಂದ್ರನ್, ಎನ್. ಜಿ. ಶೈಲೇಂದ್ರ ಉಡುಪ ಇದ್ದರು.

ಬೈಲೂರು: ತಾಲ್ಲೂಕಿನ ಬೈಲೂರು ಗ್ರಾಮದಲ್ಲಿ ಗಾಳೆ ಮಾರೆಮ್ಮ ದೇವಸ್ಥಾನ ಬಳಿ ಬಿ.ಆರ್.ಅಂಬೇಡ್ಕರರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಮಲ್ಲಪ್ಪ, ಅಂಬೇಡ್ಕರ ಸಂಘದ ಅಂಬಣ್ಣ, ಖಜಾಂಜಿ ಕರಿಬಸಪ್ಪ ಇದ್ದರು.

ಭಾಷಣ, ಘೋಷಣೆ ಇಲ್ಲ...

ಬಳ್ಳಾರಿ: ಚುನಾವಣೆ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ನಗರದಲ್ಲಿ ಶನಿವಾರ ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಭಾಷಣ, ಘೋಷಣೆಗಳಿಲ್ಲದೆ ಸರಳವಾಗಿ ನಡೆಯಿತು. ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಅಂಬೇಡ್ಕರ್‌ ಪ್ರತಿಮೆಗೆ ಹಾರಹಾಕಿ ಕೈ ಮುಗಿದು ಸರಳವಾಗಿ ಜಯಂತಿಯನ್ನು ಆಚರಿಸಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಾತ್ರ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 

ಪ್ರತಿಕ್ರಿಯಿಸಿ (+)