ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹಕ್ಕೆ ತಂ‍ಪು ಈ ಕರಬೂಜ ಹಣ್ಣು

ಚಂದದ ಮಾತು
Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹಳದಿ ಬಣ್ಣದ ಕರಬೂಜ ಹಣ್ಣಿನಲ್ಲಿ ನೀರಿನಾಂಶ ಹೇರಳವಾಗಿದೆ. ಆದ್ದರಿಂದ ಈ ಹಣ್ಣು ಬೇಸಿಗೆಗೆ ಸೂಕ್ತ. ಇದು ದೇಹಕ್ಕೆ ತಂಪು ಅಲ್ಲದ ಇದರಲ್ಲಿ ಅನೇಕ ಪೊಟಾಶಿಯಂ, ವಿಟಮಿನ್ ಎ, ಸಿ ಧಾರಾಳವಾಗಿರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಕಲ್ಲಂಗಡಿಯಂತೆಯೇ ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ಹಾಗೇ ತೂಕ ಇಳಿಸಿಕೊಳ್ಳುವವರಿಗೂ ಇದು ಉತ್ತಮ ಆಯ್ಕೆ.

* ಈ ಹಣ್ಣು ಸಪ್ಪೆಯಾಗಿರುವುದರಿಂದ ಮಧುಮೇಹ ಕಾಯಿಲೆಯವರು ಈ ಹಣ್ಣನ್ನು ಸೇವಿಸಬಹುದು. ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮಪ್ರಮಾಣದಲ್ಲಿರಿಸಿ ಮಧುಮೇಹದ ಪರಿಣಾಮಕಾರಿ ನಿಯಂತ್ರಣ ಆಗುತ್ತದೆ

* ಕರಬೂಜದ  ಜ್ಯೂಸ್‌ ಕುಡಿಯುತ್ತಿದ್ದರೆ ಕಜ್ಜಿ, ಗಜಕರ್ಣದಂತಹ ಚರ್ಮರೋಗ ವಾಸಿಯಾಗುತ್ತದೆ

* ಕರಬೂಜ ರಕ್ತವನ್ನು ಶುದ್ಧ ಮಾಡುವ ಗುಣ ಹೊಂದಿದೆ. ಹಾಗೇ ಪಿತ್ತವನ್ನು ಕಡಿಮೆ ಮಾಡುತ್ತದೆ.

* ಇದರಲ್ಲಿನ ಪೊಟಾಶಿಯಂ ರಕ್ತದೊತ್ತಡ ನಿಯಂತ್ರಿಸುತ್ತದೆ.

* ಈ ಹಣ್ಣು ಅತಿ ಕಡಿಮೆ ಕೊಬ್ಬು ಹಾಗೂ ಕಡಿಮೆ ಕ್ಯಾಲೊರಿ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಿನ್ನಬಹುದು. ಇದರಲ್ಲಿನ ನಾರಿನಾಂಶ ಬೇಗ ಹಸಿವಾಗುವುದನ್ನು ತಡೆಯುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚು ಮಾಡುತ್ತದೆ.

* ವಿಟಮಿನ್ ಎ ಮತ್ತು ಸಿ ಇದರಲ್ಲಿ ಹೆಚ್ಚಿರುವುದರಿಂದ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿಸುತ್ತದೆ.

* ವಿಟಮಿನ್ ಸಿ ಹಾಗೂ ಬೀಟಾ ಕೆರೋಟೀನ್ ಎಂಬ ಆಂಟಿ ಆಕ್ಸಿಡೆಂಟ್‌, ಕ್ಯಾನ್ಸರ್‌ ಕಾರಕ ಕಣಗಳನ್ನು ಹಿಮ್ಮೆಟ್ಟಿಸಬಲ್ಲದು. ಹಾಗಾಗಿ ಕ್ಯಾನ್ಸರ್‌ ಬರದಂತೆ ತಡೆಯುವ ಶಕ್ತಿಯೂ ಈ ಹಣ್ಣಿಗಿದೆ.

* ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸಬಲ್ಲದು.

* ಈ ಹಣ್ಣಿನ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ.

* ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಹಣ್ಣು ಸೇವನೆ ಮಾಡಿದರೆ ಪರಿಹಾರ ಕಾಣಬಹುದು.

* ಕರಬೂಜ ಹಣ್ಣು ಸೌಂದರ್ಯವರ್ಧಕವೂ ಆಗಿದೆ. ಈ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇದರ ಸೇವನೆಯಿಂದ ಚರ್ಮ ಕಾಂತಿಯುಕ್ತಯಾಗುತ್ತದೆ

* ಈ ಹಣ್ಣಿನಲ್ಲಿ ವಿಟಮಿನ್‌ ಸಿ ಚರ್ಮ ಸುಕ್ಕಾಗದಂತೆ ತಡೆಯುತ್ತದೆ. ಅಕಾಲ ಮುಪ್ಪನ್ನು ತಡೆಯುತ್ತದೆ.

* ಇದರಲ್ಲಿರುವ ವಿಟಮಿನ್‌ ಬಿ ಅಂಶ ಕೂದಲು ಉದುರುವುದನ್ನು ನಿಯಂತ್ರಿಸುತ್ತದೆ. ಶ್ಯಾಂಪೂ ಹಾಕಿ ಕೂದಲು ತೊಳೆದು ಕರಬೂಜ ಹಣ್ಣಿನ ತಿರುಳಿನಿಂದ ಮಸಾಜ್‌ ಮಾಡಿ, 10 ನಿಮಿಷದ ಬಳಿಕ ತೊಳೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT