ಗಣಿತ ಅಂದ್ರೆ ಕಷ್ಟ ಅಂದ್ರು ಸೋನಂ

7

ಗಣಿತ ಅಂದ್ರೆ ಕಷ್ಟ ಅಂದ್ರು ಸೋನಂ

Published:
Updated:
ಗಣಿತ ಅಂದ್ರೆ ಕಷ್ಟ ಅಂದ್ರು ಸೋನಂ

ಬಾಲಿವುಡ್‌ ನಟಿ ಸೋನಂ ಕಪೂರ್ ಆಗಾಗ ಫ್ಯಾಷನ್‌ ಸಂಬಂಧಿತ ಹೇಳಿಕೆ ಮತ್ತು ನಡವಳಿಕೆಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ ಈಗ ಲೆಕ್ಕ ಬಿಡಿಸಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

‘ಫಿಲಂಫೇರ್‌’ ಸಂಪಾದಕ ಜಿತೇಶ್‌ ಪಿಳ್ಳೈ ಅವರು ಟ್ವಿಟ್ಟರ್‌ನಲ್ಲಿ ಫಜಲ್‌ ಒಂದನ್ನು ಹಂಚಿಕೊಂಡಿದ್ದರು. ಇದನ್ನು ರಿಟ್ವಿಟ್ ಮಾಡಿದ ಸೋನಂ ಉತ್ತರವನ್ನೂ ಕೊಟ್ಟಿದ್ದರು. ಆದರೆ, ಉತ್ತರ ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ ಟ್ರೋಲಾದರು ಸೋನಂ. ಆ ಫಜಲ್‌ನಲ್ಲಿರುವ ಒಟ್ಟು ತ್ರಿಕೋನಗಳ ಸಂಖ್ಯೆ 18. ಆದರೆ ಸೋನಂ ಕೊಟ್ಟ ಉತ್ತರ 7 ಎಂದಾಗಿತ್ತು.

‘ದೇವರು ಮಿದುಳು ಹಂಚುತ್ತಿರುವಾಗ ಕೆಲವರು ಡಿಸೈನರ್‌ ಬಟ್ಟೆಗಳು ಹಾಗೂ ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದರು’, ‘ದೀದಿ, ನೀವ್ಯಾಕೆ ನಿಮ್ಮ ಕೆಲಸ ಮಾಡಬಾರದು, ಗಣಿತ ಅಂದ್ರೆ ಸುಲಭ ಅಲ್ಲ’, ‘ಏನ್‌ ನಿನ್‌ ಪ್ರಾಬ್ಲಂ’, ‘ಸರಿಯುತ್ತರ 18. ಹೋಗಿ ಟ್ಯೂಷನ್‌ ಪಡೆದುಕೊಳ್ಳಿ’, ‘7 ಎಂಬುದು ನಿಮ್ಮ ಐ.ಕ್ಯೂ ಅಥವಾ ಗಣಿತ ವಿಷಯದಲ್ಲಿ ನೀವು ಪಡೆದ ಅಂಕವೇ?’ ಎಂದೆಲ್ಲಾ ಅಭಿಮಾನಿಗಳು ಸೋನಂ ಅವರನ್ನು ಕೆಣಕಿದ್ದಾರೆ.

ಪ್ರತಿಕ್ರಿಯೆಗಳನ್ನೂ ಸೋನಂ ಸಕಾರಾತ್ಮಕವಾಗಿ ತಗೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ‘ಗಣಿತ ಅಂದ್ರೆ ಕಷ್ಟ’ ಎಂದು ಕಷ್ಟ ತೋಡಿಕೊಂಡಿರುವ ಅವರು ‘ಪೋಸ್ಟ್‌ ಮಾಡುವಾಗಲೇ ನನ್ನ ಉತ್ತರ ತಪ್ಪು ಎಂದು ಗೊತ್ತಿತ್ತು. ಈಗಲೂ ನನಗೆ ಸರಿಯುತ್ತರ ಗೊತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry