ಸೋಮವಾರ, ಡಿಸೆಂಬರ್ 9, 2019
17 °C

ಇದು ಸೆಲ್ಫಿ ಮ್ಯೂಸಿಯಂ

Published:
Updated:
ಇದು ಸೆಲ್ಫಿ ಮ್ಯೂಸಿಯಂ

ಸ್ಮಾರ್ಟ್‌ಫೋನ್‌ ಬಂದ ಮೇಲೆ ಸೆಲ್ಫಿಗಳದೇ ಕಾರುಬಾರು. ಹೋದಲ್ಲಿ, ಬಂದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳದಿದ್ದರೆ ಸಮಾಧಾನವಿಲ್ಲ. ಇಷ್ಟು ಪ್ರಸಿದ್ಧವಾಗಿರುವ ಸೆಲ್ಫಿಗೆ ಲಾಸ್‌ ಏಂಜಲೀಸ್‌ನಲ್ಲಿ ವಸ್ತು ಸಂಗ್ರಹಾಲಯವೇ ಆರಂಭವಾಗಿದೆ.

ಸ್ಮಾರ್ಟ್‌ಫೋನ್‌ಗಳ ಬಳಕೆಯ ಬಳಿಕ ಸೆಲ್ಫಿ ಪ್ರಸಿದ್ಧವಾಗಿದ್ದರೂ 40 ವರ್ಷಗಳ ಹಿಂದಿನಿಂದಲೂ ಮನುಷ್ಯ ಬೇರೆ ಬೇರೆ ರೂಪಗಳಲ್ಲಿ ಸ್ವಂತಿ ಫೋಟೊ ತೆಗೆದುಕೊಳ್ಳುತ್ತಿದ್ದ. ಅದರ ಇತಿಹಾಸದ ಮಾಹಿತಿ ಈ ವಸ್ತು ಸಂಗ್ರಹಾಲಯದಲ್ಲಿದೆ. ಸೆಲ್ಫಿಗೆ ಸಂಬಂಧಿಸಿದಂತೆ 15 ಬಗೆಯ

ವಿಶಿಷ್ಟ ಸಂಗ್ರಹ ಹಾಗೂ ಪ್ರದರ್ಶನಗಳಿವೆ.

ಈ ವಸ್ತು ಸಂಗ್ರಹಾಲಯವನ್ನು ಟೋಮಿ ಹಂಟನ್‌, ಟೇರ್‌ ಮಮೆಡೊವ್‌ ಅವರು ವಿನ್ಯಾಸಗೊಳಿಸಿದ್ದಾರೆ. ಇದರಲ್ಲಿ ಜಗತ್ತಿನ ಕೆಲ ಪ್ರಸಿದ್ಧ ಕಲಾಕೃತಿಗಳು ಅಥವಾ ವ್ಯಕ್ತಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂಥ ಚಿತ್ರಗಳಿವೆ.

ಈ ವಸ್ತು ಸಂಗ್ರಹಾಲಯದ ಪ್ರಮುಖ ಆಕರ್ಷಣೆ 90 ಅಡಿ ಉದ್ದ, 6 ಇಂಚು ದಪ್ಪದ ಸೆಲ್ಫಿ ಸ್ಟಿಕ್‌. ಲಾಸ್‌ ಏಂಜಲೀಸ್‌ನ ಅತಿ ಎತ್ತರದ ಕಟ್ಟಡದ ಮೇಲಿಂದ ಕ್ಲಿಕ್ಕಿಸಿಕೊಂಡ ಸೆಲ್ಫಿ, ಬಾತ್‌ರೂಮ್‌ ಸೆಲ್ಫಿ... ಸೇರಿದಂತೆ ಜಗತ್ತಿನಲ್ಲಿ ಹೆಚ್ಚು ಸುದ್ದಿ ಮಾಡಿದ ಸೆಲ್ಫಿಗಳು ಇಲ್ಲಿವೆ.

ಈ ಮ್ಯೂಸಿಯಂನಲ್ಲಿ ಪ್ರಸಿದ್ಧ ಸೆಲ್ಫಿ ಕಲಾವಿದರಾದ ಡೇವಿಡ್‌ ಜೆ. ಸ್ಲಾಟರ್‌ ಅವರ ಕಲಾಕೃತಿಗಳು, ಕ್ಯಾಮೆರಾ ಕೈಗೆ ಸಿಕ್ಕಾಗ ಆಚಾನಕ್ಕಾಗಿ ತನ್ನ ಫೋಟೊವನ್ನು ಕ್ಲಿಕ್ಕಿಸಿಕೊಂಡ ಮಂಗನ ಸ್ವಂತಿ, ವಿಶ್ವ ಪ್ರಸಿದ್ಧ ವ್ಯಕ್ತಿಗಳೊಂದಿಗೆ ತೆಗೆಸಿಕೊಂಡ ಸೆಲ್ಫಿಗಳು ಇವೆ. ಇದಲ್ಲದೇ 3ಡಿ ಸೆಲ್ಫಿಗಳೂ ಇವೆ. ಈ ಮ್ಯೂಸಿಯಂಗೆ ಸೆಲ್ಫಿ ಸ್ಟಿಕ್‌ ತೆಗೆದುಕೊಂಡು ಹೋಗಲು ಅವಕಾಶವಿದೆ. ಅಲ್ಲಿ ಸೆಲ್ಫಿ ತೆಗೆಸಿಕೊಳ್ಳಲು ಕೆಲವು ವಿಶಿಷ್ಟ ಸ್ಥಳಗಳನ್ನು ನಿರ್ಮಿಸಲಾಗಿದ್ದು, ಆಸೆಯಾದರೆ ನೀವೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು.

ಪ್ರತಿಕ್ರಿಯಿಸಿ (+)