ಗುರುವಾರ , ಡಿಸೆಂಬರ್ 12, 2019
20 °C
ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ; ಸಿಹಿ ಹಂಚಿ ಸಂಭ್ರಮಿಸಿದ ದಲಿತ ಕಾರ್ಯಕರ್ತರು

"ಸಾಮಾಜಿಕ ನ್ಯಾಯದ ನೇತಾರ ಅಂಬೇಡ್ಕರ್‌'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

"ಸಾಮಾಜಿಕ ನ್ಯಾಯದ ನೇತಾರ ಅಂಬೇಡ್ಕರ್‌'

ಬ್ಯಾಡಗಿ: ‘ದೇಶದ ಸಂವಿಧಾನವನ್ನು ರಚಿಸುವ ಮೂಲಕ ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಶ್ರೇಯಸ್ಸು ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಟಿ.ಎಂ.ಶಶಿಧರ ಹೇಳಿದರು.

ದಲಿತ ಸಂಘರ್ಷ ಸಮಿತಿ, ಜೈ ಬಲಭೀಮ ಹಮಾಲರ ಸಂಘ ಹಾಗೂ ಬಾಬು ಜಗಜೀವರಾಮ ಯುವ ಸೇನೆಯ ಸಹಯೋಗದಲ್ಲಿ ಪಟ್ಟಣದ ಗಾಂಧಿನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ‘ಡಾ.ಬಿ.ಆರ್.ಅಂಬೇಡ್ಕರ್‌ ಅವರ 127ನೇ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವರಾಮ 111ನೇ ಜಯಂತಿ’ಯಲ್ಲಿ ಅವರು ಮಾತನಾಡಿದರು.

ಮೆರವಣೆಗೆ: ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಬಾಬು ಜಗಜೀವರಾಮ ಅವರ ಭಾವ ಚಿತ್ರ ಮೆರವಣೆಗೆ ಪಟ್ಟಣದ ನೆಹರು ವೃತ್ತ, ಮುಖ್ಯ ರಸ್ತೆ, ಸುಭಾಷ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಯುವಕರು ಹಲಗೆ ನಾದಕ್ಕೆ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಂಡು ಬಂದವು.

ತಹಶೀಲ್ದಾರ್‌ ಎಸ್‌.ಎ.ಪ್ರಸಾದ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ ಎ.ಟಿ.ಜಯಕುಮಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಟಿ.ಲಮಾಣಿ, ಪುರಸಭೆ ಸದಸ್ಯ ದುರ್ಗೇಶ ಗೋಣೆಮ್ಮನವರ, ಎಪಿಎಂಸಿ ಸದಸ್ಯ ವಿಜಯ ಮಾಳಗಿ, ಡಿಎಸ್‌ಎಸ್‌ ಸಂಚಾಲಕ ರವಿ ಹುಣಸಿಮರದ, ಮುಖಂಡರಾದ ಸುರೇಶ ಆಸಾದಿ, ನಾಗರಾಜ ಹಾವನೂರ, ಬಸವರಾಜ ಹನುಮಾಪುರ, ಪರಶುರಾಮ ಗಂಗಮ್ಮನವರ, ಬಸವರಾಜ ತಡಸದ, ಶಿವಾಜಿ ಚಿಕ್ಕಣ್ಣನವರ ಇದ್ದರು.

 

ಪ್ರತಿಕ್ರಿಯಿಸಿ (+)