ರಾಮನಗರ ತಾಲ್ಲೂಕಿನ ವಿಭೂತಿಕೆರೆ ಬಳಿ ಅಪಘಾತ: ಬಾಲಕ‌ ಸೇರಿ ಇಬ್ಬರು ಸಾವು

ಶುಕ್ರವಾರ, ಮಾರ್ಚ್ 22, 2019
26 °C

ರಾಮನಗರ ತಾಲ್ಲೂಕಿನ ವಿಭೂತಿಕೆರೆ ಬಳಿ ಅಪಘಾತ: ಬಾಲಕ‌ ಸೇರಿ ಇಬ್ಬರು ಸಾವು

Published:
Updated:
ರಾಮನಗರ ತಾಲ್ಲೂಕಿನ ವಿಭೂತಿಕೆರೆ ಬಳಿ ಅಪಘಾತ: ಬಾಲಕ‌ ಸೇರಿ ಇಬ್ಬರು ಸಾವು

ರಾಮನಗರ: ತಾಲ್ಲೂಕಿನ ವಿಭೂತಿಕೆರೆ ಗ್ರಾಮದ ಬಳಿ ಭಾನುವಾರ ಟ್ರ್ಯಾಕ್ಟರ್‌ ಹಾಗೂ  ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.‌

ಬನ್ನಿಕುಪ್ಪೆ ಗ್ರಾಮದ ಸ್ವರೂಪ್(18) ಶ್ರೇಯಸ್(10) ಮೃತರು. ಈ ಇಬ್ಬರು ಬನ್ನಿಕುಪ್ಪೆಯಿಂದ ರಾಮನಗರದ ಕಡೆಗೆ ಬೈಕಿನಲ್ಲಿ‌ ಹೊರಟಿದ್ದರು. ಈ ವೇಳೆ‌ ವಿಭೂತಿಕೆರೆ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ  ಟ್ರ್ಯಾಕ್ಟರ್ ನಡುವೆ ಡಿಕ್ಕಿ‌ ಸಂಭವಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶವಗಳನ್ನು ರಾಮನಗರದ ಜಿಲ್ಲಾ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಲಾಯಿತು.‌ ರಾಮನಗರ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry