ಮಂಗಳವಾರ, ಡಿಸೆಂಬರ್ 10, 2019
26 °C

ಗುಡುಗು ಸಹಿತ ಮಳೆ: ಸಿಡಿಲು ಬಡಿದು ಕುರಿಗಾರ, ಕುರಿಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡುಗು ಸಹಿತ ಮಳೆ: ಸಿಡಿಲು ಬಡಿದು ಕುರಿಗಾರ, ಕುರಿಗಳು ಸಾವು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಹಾಗೂ ಸಿಂಧನೂರು ತಾಲ್ಲೂಕಿನ ವಿವಧೆಡೆ ಭಾನುವಾರ ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದು, ಸಿಂಧನೂರಿನ ಸಾಲಗುಂದಾ ಗ್ರಾಮದಲ್ಲಿ ಸಿಡಿಲು ಬಡಿದು ಒಬ್ಬ ಕುರಿಗಾರ ಮತ್ತು ಮೂರು ಕುರಿಗಳು ಮೃತಪಟ್ಟಿವೆ.

ಸಾಲಗುಂದಾ ಗ್ರಾಮದ ಮೆಹಬೂಬ್ ರಾಜಾಸಾಬ್ ನಾಯಕ (18) ಮೃತಪಟ್ಟಿದ್ದಾರೆ. ಲಿಂಗಸುಗೂರು ಪಟ್ಟಣ, ಮುದಗಲ್, ಹಟ್ಟಿ ಚಿನ್ನದ ಗಣಿ ಹಾಗೂ ಕವಿತಾಳದಲ್ಲಿ ಸಾಧಾರಣ ಮಳೆ ಸುರಿದಿದೆ. 

ಪ್ರತಿಕ್ರಿಯಿಸಿ (+)