7

ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ; ಪದಕ ಪಟ್ಟಿಯಲ್ಲಿ ಬಾರತಕ್ಕೆ ಮೂರನೇ ಸ್ಥಾನ

Published:
Updated:
ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ; ಪದಕ ಪಟ್ಟಿಯಲ್ಲಿ ಬಾರತಕ್ಕೆ ಮೂರನೇ ಸ್ಥಾನ

ಗೋಲ್ಡ್‌ ಕೋಸ್ಟ್: ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಬೃಹತ್‌ ಕ್ರೀಡಾಂಗಣದಲ್ಲಿ, ಸಂಗೀತ, ಲೇಸರ್‌ ಲೈಟ್‌ನ ವಿಭಿನ್ನ ವಿನ್ಯಾಸ ಹಾಗೂ ಆಗಸದಲ್ಲಿ ಬಣ್ಣ ಬಣ್ಣದ ಬಾಣ ಬಿರುಸುಗಳ ಚಿತ್ತಾರದೊಂದಿಗೆ 21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಭಾನುವಾರ ತರೆಬಿತ್ತು.

ಭಾರತೀಯ ಕ್ರೀಡಾಪಟು ಕೂಡದಲ್ಲಿ ಚಿನ್ನಗೆದ್ದ ಬಾಕ್ಸರ್‌ ಮೇರಿ ಕೋಮ್‌ ತ್ರಿವರ್ಣ ಧ್ವಜ ಹಿಡಿದು ಕ್ರೀಡಾಂಗಣದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದರು.

ಕೊನೆಯ ದಿನವೂ ಪದಕಗಳ ಭೇಟೆಯಲ್ಲಿ ಭಾರತೀಯರು ಪಾರಮ್ಯ ಮೆರೆದಿದ್ದಾರೆ. ವಿಶ್ವದ ಮೂರನೇ ಶ್ರೇಯಾಂಕಿತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧುರನ್ನು ಮಣಿಸುವ ಮೂಲಕ ಸೈನಾ ನೆಹ್ವಾಲ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದರು. ಪಿ.ವಿ.ಸಿಂಧು ಬೆಳ್ಳಿಪದಕಕ್ಕೆ ಮುತ್ತಿಟ್ಟರು.

ಸ್ಕ್ವಾಷ್‌ ವಿಭಾಗದ ಮಿಕ್ಸಡ್‌ ಡಬಲ್ಸ್‌ನಲ್ಲಿ ಸೌರವ್ ಘೋಸಾಲ್ ಮತ್ತು ದೀಪಿಕಾ ಪಲ್ಲಿಕಲ್ ಬೆಳ್ಳಿ ಗೆದ್ದಿದ್ದಾರೆ.

12 ದಿನದ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾ‍ಪಟುಗಳು ಒಟ್ಟು 66 ಪದಕಗಳನ್ನು ರಾಷ್ಟ್ರಕ್ಕೆ ಗಳಿಸಿಕೊಟ್ಟಿದ್ದಾರೆ. ಇದರಲ್ಲಿ 26 ಚಿನ್ನದ ಪದಕ ಗಳಿಸಿರುವುದು ಹೆಮ್ಮೆಯ ವಿಷಯ. ಇದರೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಕೂಡದಲ್ಲಿ ಚಿನ್ನಗೆದ್ದ ಬಾಕ್ಸರ್‌ ಮೇರಿ ಕೋಮ್‌ ತ್ರಿವರ್ಣ ಧ್ವಜ ಹಿಡಿದು ಕ್ರೀಡಾಂಗಣದಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದರು. –ಚಿತ್ರಗಳು: ಎಎಫ್‌ಪಿ, ರಾಯಿಟರ್ಸ್‌

ಕ್ರೀಡಾಂಗಣದಲ್ಲಿ ಬಾಣ ಬಿರುಸಿನ ಚಿತ್ತಾರ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry