ಭಾನುವಾರ, ಡಿಸೆಂಬರ್ 15, 2019
25 °C

ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ, ಮಳೆ: ನೆಲಕಚ್ಚಿದ ಭತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ, ಮಳೆ: ನೆಲಕಚ್ಚಿದ ಭತ್ತ

ಕೊಪ್ಪಳ: ಜಿಲ್ಲೆಯ ಕಾರಟಗಿ ಸುತ್ತಮುತ್ತ ಭಾನುವಾರ ಭಾರೀ ಪ್ರಮಾಣದ ಗಾಳಿ ಮಳೆ ಆಗಿದೆ.

ಬಸವಣ್ಣ ಕ್ಯಾಂಪ್, ನಾಗನಕಲ್ಲು, ಪನ್ನಾಪುರ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಆಗಿದ್ದು ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಇದೇ ಪ್ರದೇಶದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ಬಸವಣ್ಣ ಕ್ಯಾಂಪ್ ನಿವಾಸಿ ಪ್ರಸಾದ್ ವಿವರಿಸಿದರು.

ಕಾರಟಗಿಯಲ್ಲಿ ಅಕ್ಕಿ ಗಿರಣಿಯ ಸೂರಿನ ತಗಡು ಹಾರಿ ಹಾನಿಯಾಗಿದೆ. ಬಿರುಗಾಳಿಯ ರಭಸಕ್ಕೆ ಹಲವಾರು ಮರಗಳು ಉರುಳಿಬಿದ್ದಿವೆ.

ಬಿರುಗಾಳಿಗೆ ಪೆಂಡಾಲ್‌ ಕಾರಿನ ಮೇಲೆ ಬಿದ್ದಿದೆ.

* ಇವನ್ನೂ ಓದಿ...

ಹೊಸಪೇಟೆ, ಬೀದರ್‌ನಲ್ಲಿ ಬಿರುಗಾಳಿ ಸಹಿತ ಮಳೆ; ಪೂರ್ವ ಮುಂಗಾರಿಗೆ ಮುನ್ನುಡಿ ಬರೆದ ಮೊದಲ ಮಳೆ ‘ಅಶ್ವಿನಿ’

ಗುಡುಗು ಸಹಿತ ಮಳೆ: ಸಿಡಿಲು ಬಡಿದು ಕುರಿಗಾರ, ಕುರಿಗಳು ಸಾವು

ಪ್ರತಿಕ್ರಿಯಿಸಿ (+)