ಮಂಗಳವಾರ, ಡಿಸೆಂಬರ್ 10, 2019
26 °C

ಆರ್‌ಸಿಬಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ 19 ರನ್‌ ಜಯ

Published:
Updated:
ಆರ್‌ಸಿಬಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ಗೆ 19 ರನ್‌ ಜಯ

ಬೆಂಗಳೂರು: ನಗರದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ 11ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ 19 ರನ್‌ ಜಯ ಸಾಧಿಸಿದೆ.

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಮೊದಲು ಬ್ಯಾಟ್‌ ಮಾಡಿದ ರಾಯಲ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 217 ರನ್‌ ಗಳಿಸಿತ್ತು(ಸಂಜು ಸ್ಯಾಮ್ಸನ್‌ ಅಜೇಯ 92, ರಹಾನೆ 36).

218 ರನ್‌ ಬೃಹತ್‌ ಮೊತ್ತ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 198 ರನ್‌ ಗಳಿಸಿ ಆಟ ಮುಗಿಸಿತು(ವಿರಾಟ್‌ ಕೊಹ್ಲಿ 57, ಮನದೀಪ್‌ ಸಿಂಗ್‌ 47, ವಾಷಿಂಗ್ಟನ್ ಸುಂದರ್ 35, ಎ.ಬಿ. ಡಿವಿಲಿಯರ್ಸ್‌ 20).

ಪ್ರತಿಕ್ರಿಯಿಸಿ (+)