ಸೋಮವಾರ, ಜುಲೈ 13, 2020
25 °C

‘ಮಗಳ ರಕ್ಷಣೆಗೆ ಆದ್ಯತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಗಳ ರಕ್ಷಣೆಗೆ ಆದ್ಯತೆ’

‘ಸಮಾಜದ ದುಷ್ಟ ಮತ್ತು ಕೆಟ್ಟ ಮನಸಿನ ವ್ಯಕ್ತಿಗಳಿಂದ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲ ರೀತಿಯ ರಕ್ಷಣೆಯನ್ನು ನಿನಗೆ ಒದಗಿಸುತ್ತೇನೆ’ ಎಂದು ಬಾಲಿವುಡ್‌ ನಟಿ ಸನ್ನಿ ಲಿಯೋನ್‌, ತನ್ನ ದತ್ತು ಪುತ್ರಿ ನಿಶಾಗೆ ಭರವಸೆ ನೀಡಿದ್ದಾರೆ.

‘ನಿನ್ನ ಸುರಕ್ಷತೆಗಾಗಿ ನನ್ನ ತನು, ಮನವನ್ನೆಲ್ಲಾ ಅರ್ಪಿಸುತ್ತೇನೆ. ನಿನ್ನ ರಕ್ಷಣೆಗಾಗಿ ನನ್ನ ಪ್ರಾಣ ಕೊಡಲೂ ಸಿದ್ಧಳಿದ್ದೇನೆ’ ಎಂದು ಟ್ವೀಟ್‌ ಮಾಡಿರುವ ಸನ್ನಿ, ಮಗಳನ್ನು ಬಿಗಿದಪ್ಪಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಎಂತಹ ಸಂದರ್ಭದಲ್ಲೂ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಅವರು ಮಕ್ಕಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.